ಕರ್ನಾಟಕ

ಮೈಸೂರು: ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಯೋಧ

Pinterest LinkedIn Tumblr


ಮೈಸೂರು: ಮಂಡಿ ಪೊಲೀಸ್ ಠಾಣಾ ನಿಯಂತ್ರಣದಲ್ಲಿ ಬರುವ ಲಾಡ್ಜ್ ವೊಂದರಲ್ಲಿ ಸೇನೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಯೋಧರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ಶುಕ್ರವಾರ ತಿಳಿದುಬಂದಿದೆ.

ಡಿ.ವಿ.ಕುಮಾರ್ (38) ಆತ್ಮಹತ್ಯೆಗೆ ಶರಣಾದ ಯೋಧರಾಗಿದ್ದು, ಗಾಂಧಿನಗರದ ನಿವಾಸಿಯಾಗಿದ್ದಾರೆ. ಕುಮಾರ್ ಅವರು ಪಶ್ಚಿಮ ಬಂಗಾಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.

ರಜೆ ಪಡೆದುಕೊಂಡು ಮೈಸೂರಿಗೆ ಬಂದಿದ್ದ ಕುಮಾರ್ ಅವರು ನ.14 ರಂದು ಲಾಡ್ಜ್ ವೊಂದರ ರೂಮ್”ಗೆ ಬಂದಿದ್ದಾರೆ. ರೂಮಿಗೆ ಬಂದ ಕೆಲ ಗಂಟೆಗಳ ಬಳಿಕ ಹೊರಗೆ ಹೋಗಿರುವ ಕುಮಾರ್ ಅವರು ಮತ್ತೆ ರೂಮಿಗೆ ಬಂದು ಬಾಗಿ ಹಾಕಿಕೊಂಡಿದ್ದಾರೆ. ಬಳಿಕ ದಿನವಾದರೂ ಹೊರ ಬಂದಿಲ್ಲ. ಇದರಿಂದ ಅನುಮಾನಗೊಂಡಿರುವ ಲಾಡ್ಸ್ ಸಿಬ್ಬಂದಿಗಳು, ಬಾಗಿಲು ತೆಗೆದು ನೋಡಿದಾಗ ಕುಮಾರ್ ಅವರು ನೇಣಿಗೆ ಶರಣಾಗಿರುವುದು ಬೆಳಕಿಗೆ ಬಂದಿದೆ.

ಆತ್ಮಹತ್ಯೆಗೂ ಮುನ್ನ ಕುಮಾರ್ ಅವರು ಡೆತ್ ನೋಟ್ ಬರೆದಿಟ್ಟಿದ್ದು, ಆರೋಗ್ಯ ಸಮಸ್ಯೆಗಳಿಂದಾಗಿ ಆತ್ಮಹತ್ಯೆಗೆ ಶರಣಾಗುತ್ತಿರುವುದಾಗಿ ಹೇಳಿಕೊಂಡಿದ್ದಾರೆಂದು ಪ್ರಾಥಮಿಕ ತನಿಖಾ ವರದಿಯಿಂದ ತಿಳಿದುಬಂದಿದೆ. ಇದಲ್ಲದೆ ಕೊಠಡಿಯಲ್ಲಿ ಕುಮಾರ್ ಅವರ ಬ್ಯಾಗ್ ವೊಂದು ಪತ್ತೆಯಾಗಿದ್ದು, ಬ್ಯಾಗ್ ನಲ್ಲಿ ಕುಮಾರ್ ಅವರ ಆರೋಗ್ಯಕ್ಕೆ ಸಂಬಂಧಿಸಿದ ವರದಿಗಳು ಪತ್ತೆಯಾಗಿವೆ ಎಂದು ಹೇಳಲಾಗುತ್ತಿದೆ.

ಇನ್ನು ಕುಮಾರ್ ಅವರ ಪತ್ನಿ ರೇವತಿ ಹಾಗೂ ಪುತ್ರಿ ರಮಣಿ ಕಳೆದ 6 ತಿಂಗಳಿನಿಂದಲೂ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದು, ಸ್ಥಳೀಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಸ್ತುತ ಕುಮಾರ್ ಅವರ ಮೃತದೇಹವನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

Comments are closed.