ಕರ್ನಾಟಕ

ವೈದ್ಯರ ಮುಷ್ಕರ: ವೈದ್ಯ ಮಸೂದೆ ಹಗ್ಗಜಗ್ಗಾಟಕ್ಕೆ 6 ಬಲಿ

Pinterest LinkedIn Tumblr

ಬೆಂಗಳೂರು: ಖಾಸಗಿ ಆಸ್ಪತ್ರೆಗಳ ಮೇಲೆ ನಿಯಂತ್ರಣ ಹೇರಲು ಉದ್ದೇಶಿಸಿರುವ ಕೆಪಿಎಂಇ ಮಸೂದೆ ಕುರಿತಂತೆ ವೈದ್ಯರು ಹಾಗೂ ರಾಜ್ಯ ಸರ್ಕಾರದ ನಡುವಿನ ಹಗ್ಗಜಗ್ಗಾಟಕ್ಕೆ ರೋಗಿಗಳು ಅಕ್ಷರಶಃ ನಲುಗಿ ಹೋಗುತ್ತಿದ್ದಾರೆ.

ವೈದ್ಯರ ಪ್ರತಿಭಟನೆಗಳಿಗೆ ಮಣಿಯದ ಸರ್ಕಾರ ತನ್ನ ನಿರ್ಧಾರವನ್ನು ಮುಂದುವರೆಸಿದ್ದು, ಮತ್ತೊಂದೆಡೆ ವೈದ್ಯರೂ ಕೂಡ ತಮ್ಮ ಪಟ್ಟು ಬಿಡದೆ ಪ್ರತಿಭಟನೆಗಳನ್ನು ಮುಂದುವರೆಸುತ್ತಿದ್ದು, ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಈ ವರೆಗೂ ರಾಜ್ಯ 6 ಮಂದಿ ಅಮಾಯಕರು ಸಾವನ್ನಪ್ಪಿದ್ದಾರೆ.

ಖಾಸಗಿ ವೈದ್ಯರ ಧರಣಿಯಿಂದಾಗಿ ಸಕಾಲಕ್ಕೆ ಚಿಕಿತ್ಸೆ ದೊರೆಯದೆ ತಿಪಟೂರಿನ ಮೂರು ತಿಂಗಳ ಕಂದಮ್ಮ ಮೃತಪಟ್ಟಿರುವುದಾಗಿ ವರದಿಗಳು ತಿಳಿಸಿವೆ. ಅನಾರೋಗ್ಯಕ್ಕೀಡಾಗಿದ್ದ ಮಗುವನ್ನು ಹಿಡಿದು ಪೋಷಕರು ತಿಪಟೂರಿನ ಸಾಕಷ್ಟು ಖಾಸಗಿ ಆಸ್ಪತ್ರೆಗಳಿಗೆ ಅಲೆದಾಡಿದ್ದಾರೆ. ಆದರೂ ಮಗುವಿಗೆ ಸಕಾಲಕ್ಕೆ ಚಿಕಿತ್ಸೆ ದೊರಕಿಲ್ಲ.

ತುಮಕೂರಿನಲ್ಲಿ ಹೃದಯ ಸ್ತಂಭನದಿಂದಾಗಿ ನರ್ಸಿಂಗ್ ವಿದ್ಯಾರ್ಥಿಯೊಬ್ಬರು ಮೃತಪಟ್ಟಿದ್ದಾರೆ. ಹೃದಯಾಘಾತದಿಂದ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಜ್ಞಾನಪ್ಪ ಬದ್ನಾಲ್ (56) ಎಂಬುವವರು ಸಾವನ್ನಪ್ಪಿದ್ದಾರೆ.

ಅತೀವ್ರ ಜ್ವರದಿಂದ ಬಳಲುತ್ತಿದ್ದ ಧಾರವಾಡ ಮೂಲದ 13 ವರ್ಷದ ಬಾಲಕಿ ವೈಷ್ಣವಿ ಜಾಧವ್ ಎಂಬುವವರು ಮೃತಪಟ್ಟಿದ್ದಾರೆ.

ಸಕ್ಕರೆ ಕಾಯಿಲೆಯಿಂದ ಬಳಲುತ್ತಿದ್ದ ಬೆಳಗಾವಿ ಮೂಲದ 8 ವರ್ಷ ಬಾಲಕಿ ಕಲ್ಲವ್ವ ಮೃತಪಟ್ಟಿದ್ದಾಳೆ. ಖಾಸಗಿ ಆಸ್ಪತ್ರೆಯಲ್ಲಿಚ ಚಿಕಿತ್ಸೆ ಪಡೆಯುತ್ತಿದ್ದ ಕಲ್ಲವ್ಪ, ವೈದ್ಯರು ಧರಣಿ ನಡೆಸುತ್ತಿದ್ದ ಹಿನ್ನಲೆಯಲ್ಲಿ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಳು. ಸಕಾಲಕ್ಕೆ ಚಿಕಿತ್ಸೆ ದೊರಕದೆ ಮಂಗಳವಾರ ಸಾವನ್ನಪ್ಪಿದ್ದಾಳೆಂದು ತಿಳಿದುಬಂದಿದೆ.

ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದಾರೂರ್ ಗ್ರಾಮದ ನಿವಾಸಿ ಮಹೇಳ್ ಚಂದ್ರಕಾಂತ್ ವಾಘಾಮೊಡೆಯವರು ಸಕಾಲಕ್ಕೆ ಚಿಕಿತ್ಸೆ ದೊರೆಯದೆ ಸಾವನ್ನಪ್ಪಿದ್ದಾರೆ.

ಧರಣಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಭಾರತೀಯ ವೈದ್ಯಕೂಯ ಸಂಘದ ಕಾರ್ಯದರ್ಶಿ ಡಾ.ವೀರಣ್ಣ ಬಿ ಅವರು, ಖಾಸಗಿ ಆಸ್ಪತ್ರೆಗಳನ್ನು ಮಾಡುವಂತೆ ನಾವು ಹೇಳಿಲ್ಲ. ರಾಜ್ಯದಲ್ಲಾಗುತ್ತಿರುವ ಸಾವುಗಳಿಗೆ ನಾವು ಜವಾಬ್ದಾರರಲ್ಲ. ನಮಗೆ ದೊರಕಿರುವ ಮೂಲಗಳ ಮಾಹಿತಿ ಪ್ರಕಾರ, ಈಗಾಗಲೇ ಮಸೂದೆಯನ್ನು ಜಂಟಿ ಆಯ್ಕೆ ಸಮಿತಿ ಬಳಿ ಸಲ್ಲಿಗೆ ಮಾಡಲಾಗಿದ್ದು, ಬುಧವಾರ ಮಸೂದೆ ಕುರಿತಂತೆ ಚರ್ಚೆ ನಡೆಸಲಿದೆ ಎಂದು ತಿಳಿದುಬಂದಿದೆ ಎಂದು ಹೇಳಿದ್ದಾರೆ.

Comments are closed.