ಕರ್ನಾಟಕ

ದಿಲ್ಲಿಗೆ ಹೋಗುವುದಾದರೆ ವ್ಯಾಕ್ಸಿನೇಷನ್‌ ಹಾಕಿಸಿಕೊಳ್ಳಿ

Pinterest LinkedIn Tumblr


ಬೆಂಗಳೂರು: ದಿಲ್ಲಿಯಲ್ಲಿ ವಾಯು ಮಾಲಿನ್ಯ ಮಿತಿ ಮೀರಿದ್ದು, ಅಲ್ಲಿಗೆ ಪ್ರಯಾಣಿಸುವವರು ಮುಂಜಾಗ್ರತಾ ಕ್ರಮವಾಗಿ ಫ್ಲ್ಯೂ ವ್ಯಾಕ್ಸಿನೇಷನ್‌ ಹಾಕಿಸಿಕೊಳ್ಳಬೇಕು. ಅಲ್ಲಿರುವಾಗ ಮಾಸ್ಕ್ ಧರಿಸಬೇಕು ಎಂದು ಬೆಂಗಳೂರಿನ ವೈದ್ಯರು ಸಲಹೆ ನೀಡಿದ್ದಾರೆ.

ದಿಲ್ಲಿಯನ್ನು ಸಂಪೂರ್ಣ ಹೊಗೆ ಆವರಿಸಿಕೊಂಡಿದೆ. ಶಾಲೆಗಳನ್ನು ಬಂದ್‌ ಮಾಡಲಾಗಿದೆ. ವಿಮಾನಗಳ ಹಾರಾಟ ಕೂಡ ಸ್ಥಗಿತಗೊಂಡಿದೆ. ಜನರಿಗೂ ಮನೆಗಳಿಂದ ಹೊರ ಬರದಂತೆ ಸೂಚಿಸಲಾಗಿದೆ. ಹೀಗಾಗಿ ದಿಲ್ಲಿಗೆ ಹೋಗುವವರು ಬಹಳ ಎಚ್ಚರಿಕೆ ವಹಿಸಬೇಕು ಎಂದು ಕೊಲಂಬಿಯಾ ಏಷ್ಯಾ ಆಸ್ಪತ್ರೆಯ ವೈದ್ಯ ಹಿರೆಣ್ಣಪ್ಪ ಉಂದುರ್‌ ಹೇಳಿದ್ದಾರೆ.

‘2014 ರಿಂದ ದಿಲ್ಲಿಯಲ್ಲಿ ವಾಸವಿದ್ದೇನೆ. ಈ ವರ್ಷದಷ್ಟು ಪರಿಸ್ಥಿತಿ ಯಾವತ್ತೂ ಹದಗೆಟ್ಟಿರಲಿಲ್ಲ. ನಾನು ಉಸಿರಾಟದ ಸಮಸ್ಯೆ ಎದುರಿಸುತ್ತಿದ್ದು, ಮಾಸ್ಕ್‌ ಬಳಸುತ್ತಿದ್ದೇನೆ,’ ಎಂದು ಉದ್ಯಮಿಯೊಬ್ಬರು ಹೇಳುತ್ತಾರೆ.

‘ನನಗೆ ನನ್ನ ಅಸ್ತಮಾ ಪೀಡಿತ ತಾಯಿಯದೇ ಯೋಚನೆಯಾಗಿದೆ. ದೀಪಾವಳ ಸಮಯದಲ್ಲಿ ಧೂಳಿತ್ತು, ಆದರೆ ಮಾಲಿನ್ಯ ಇರಲಿಲ್ಲ. ಈಗ ಗಂಟಲು ಕೆರೆತ, ಚರ್ಮದ ಸಮಸ್ಯೆ ಎದುರಾಗಿದೆ,’ಎಂದು ಮೂರು ವರ್ಷಗಳಿಂದ ದಿಲ್ಲಿಯ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿರುವ ಯೋಗೇಶ್‌ ಕೊಹ್ಲಿ ಹೇಳುತ್ತಾರೆ.

ಅಸ್ತಮಾ ಸೇರಿದಂತೆ ಶ್ವಾಸಕೋಶ ಸಂಬಂಧಿ ಸಮಸ್ಯೆ ಇರುವವರು ಬಹಳಷ್ಟು ಎಚ್ಚರಿಕೆ ವಹಿಸಬೇಕು ಎಂದು ಮಣಿಪಾಲ್‌ ಆಸ್ಪತ್ರೆಯ ಡಾ, ಸತ್ಯನಾರಾಯಣ ಹೇಳಿದ್ದಾರೆ. ಅಲ್ಲಿಗೆ ಹೋಗುವವರು ಶ್ವಾಸಕೋಶ ತಪಾಸಣೆ ನಡೆಸಿ, ಜ್ವರದ ವಿರುದ್ಧ ಲಸಿಕೆ ತೆಗೆದುಕೊಂಡು ಹೋಗುವುದು ಉತ್ತಮ. ಇತ್ತೀಚೆಗೆ ಬೆಂಗಳೂರಿಗೆ ಹೋಗಿ ವಾಪಸ್‌ ಬಂದವರು ಬಹಳಷ್ಟು ಆರೋಗ್ಯ ಸಮಸ್ಯೆಗಳಿಗೆ ಒಳಗಾಗಿದ್ದರು. ಎಂದು ಅವರು ತಿಳಿಸಿದ್ದಾರೆ.

Comments are closed.