ಕರ್ನಾಟಕ

ಸಿದ್ದರಾಮಯ್ಯ 2019 ರ ಕಾಂಗ್ರೆಸ್‌ನ ಪಿಎಂ ಅಭ್ಯರ್ಥಿ!

Pinterest LinkedIn Tumblr


ಚಾಮುಂಡೇಶ್ವರಿ : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2019 ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಧಾನಮಂತ್ರಿ ಅಭ್ಯರ್ಥಿ ಎಂದು ಜೆಡಿಎಸ್‌ ನಾಯಕ, ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಭಾನುವಾರ ವ್ಯಂಗ್ಯವಾಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಜಿಟಿಡಿ’ಸಿದ್ದರಾಮಯ್ಯ ಅವರು ಕ್ಷೇತ್ರ ಬದಲಿಸುವ ಅಗತ್ಯವಿಲ್ಲ. ಅವರು ಮುಂದಿನ ಪ್ರಧಾನಿ ಅಭ್ಯರ್ಥಿ,ಅದಕ್ಕೆ ”ಮೋದಿಗೆ ನನ್ನನ್ನು ಕಂಡರೆ ಭಯ” ಎಂದಿದ್ದಾರೆ.ಬೇಕಾದರೆ ಬರೆದಿಟ್ಟುಕೊಳ್ಳಿ’ಎಂದರು.

‘ದೇಶದೆಲ್ಲೆಡೆ ಕಾಂಗ್ರೆಸ್‌ ಸತ್ತು ಹೋಗುತ್ತಿದೆ. ಮೋದಿ ವಿರುದ್ಧ ಮಾತನಾಡುವ ನಾಯಕರು ಕಾಂಗ್ರೆಸ್‌ನಲ್ಲಿ ಇಲ್ಲ. ಸಿದ್ದರಾಮಯ್ಯ ಅವರು ಮಾತ್ರ ಮಾತನಾಡುತ್ತಿದ್ದಾರೆ, ಅವರಿಗೆ ಪ್ರಧಾನಿ ಆಗುವ ಆಸೆ ಇದೆ’ ಎಂದರು.

-ಉದಯವಾಣಿ

Comments are closed.