ಕರ್ನಾಟಕ

ರಕ್ತ ಶುದ್ದಿಕರಣದ ಜೊತೆಗೆ ಮಧುಮೇಹಿಗಳಿಗೆ ಈ ಹಣ್ಣು ಉತ್ತಮ ಔಷಧಿ.

Pinterest LinkedIn Tumblr

ಸೀಸನಲ್ ಫ್ರೂಟ್…ನೇರಳೆ ಹಣ್ಣು. ಕೇವಲ ಈ ಕಾಲದಲ್ಲಿ ಮಾತ್ರ ಇದು ದೊರೆಯುತ್ತದೆ. ಈಗೀಗ ಮಾರುಕಟ್ಟೆಯಲ್ಲಿ ದರ್ಶನ ನೀಡುತ್ತಿವೆ ನೇರಳೆಹಣ್ಣುಗಳು. ಇವು ಸಿಹಿಯಾಗಿ ಇರಲ್ಲವಾದ್ದರಿಂದ … ಇಷ್ಟಪಟ್ಟು ತಿನ್ನುವವರು ಕಡಿಮೆ. ಆದರೆ ನಾವು ಹೇಳುವುದೇನೆಂದರೆ….ಇಷ್ಟ ಇರಲಿ ಬಿಡಲಿ ಸೀಜನಲ್ ಫ್ರೂಟ್ ತಿನ್ನುವುದು ತುಂಬಾ ಒಳಿತು. ನೇರಳೆಯಲ್ಲಿ ಅದೆಷ್ಟೋ ಔಷಧಿ ಗುಣಗಳಿವೆ. ಇದರಲ್ಲಿ ವಿಟಮಿನ್ ಸಿ ಅಧಿಕವಾಗಿ ಲಭಿಸುತ್ತದೆ. ಇದರಿಂದ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಮಳೆಗಾಲದಲ್ಲಿ ಬರುವ ಅನೇಕ ರೋಗಗಳನ್ನು ತಡೆಯುವ ಶಕ್ತಿ ಇದು ನೀಡುತ್ತದೆ.

ನೇರಳೆಯಲ್ಲಿ ಕಬ್ಬಿಣಾಂಶ ಹೆಚ್ಚಾಗಿ ದೊರೆಯುತ್ತದೆ. ದೇಹಕ್ಕೆ ಅಗತ್ಯವಿರುವಷ್ಟು ಹಿಮೋಗ್ಲೋಬಿನ್ ಲಭ್ಯವಾಗಲು ಇದು ಸಹಕಾರಿ. ರಕ್ತವನ್ನು ಶುದ್ಧ ಮಾಡುವಲ್ಲೂ ಇದರ ಪಾತ್ರ ಅಧಿಕ.
ಇವನ್ನು ತಿನ್ನುವುದರಿಂದ ಅಜೀರ್ಣ ಸಮಸ್ಯೆಗಳು ದೂರವಾಗುತ್ತವೆ. ಆಹಾರ ಚೆನ್ನಾಗಿ ಜೀರ್ಣವಾಗುತ್ತದೆ. ಚಯಾಪಚಯೆ ಕ್ರಿಯೆ ಉತ್ತಮಗೊಳ್ಳುತ್ತದೆ.

ಮಧುಮೇಹಿಗಳಿಗೆ ನೇರಳೆ ಹಣ್ಣು ಉತ್ತಮ ಔಷಧಿ. ಇದನ್ನು ನಿತ್ಯ ತಿಂದರೆ ರಕ್ತದಲ್ಲಿನ ಸಕ್ಕರೆ ಅಂಶ ನಿಯಂತ್ರಣಕ್ಕೆ ಬರುತ್ತದೆ. ನಿತ್ಯ ದಾಹವಾಗುವುದು, ಪದೇಪದೇ ಮೂತ್ರಕ್ಕೆ ಹೋಗುವಂತಹ ಸಮಸ್ಯೆಗಳನ್ನು ಇದು ನಿಯಂತ್ರಿಸುತ್ತದೆ. ಇದು ಉತ್ತಮ ಆಂಟಿ ಬಯೋಟಿಕ್ ಆಗಿ ಕೆಲಸ ಮಾಡುತ್ತದೆ.

ಅಧಿಕ ರಕ್ತದ ಒತ್ತಡಕ್ಕೆ ಗುರಿಯಾಗದಂತೆ ನೋಡಿಕೊಳ್ಳುತ್ತದೆ. ರಕ್ತದ ಒತ್ತಡವನ್ನು ನಿಯಂತ್ರಣದಲ್ಲಿಡುತ್ತದೆ. ಹೃದಯದ ಕೆಲಸವನ್ನು ಸುಗಮಗೊಳಿಸುತ್ತದೆ.
ಸೌಂದರ್ಯವನ್ನು ಹೆಚ್ಚಿಸುವಲ್ಲೂ ಇದರ ಪಾತ್ರ ಅಧಿಕ. ಇದನ್ನು ನಿತ್ಯ ತಿನ್ನುವುದರಿಂದ ಚರ್ಮದ ಮೇಲೆ ಸುಕ್ಕುಗಳು ಆಗಲ್ಲ. ವೃದ್ದಾಪ್ಯ ಛಾಯೆಗಳು ಬೇಗ ಬರಲ್ಲ.

Comments are closed.