ಕರ್ನಾಟಕ

PFI ಸಂಘಟನೆ ನಿಷೇಧಿಸಿ: ದಿನೇಶ್‌ ಗುಂಡು ರಾವ್‌ ಮನವಿ

Pinterest LinkedIn Tumblr


ಬೆಂಗಳೂರು: ಕಳೆದ ಕೆಲ ದಿನಗಳಿಂದ ಬಿಜೆಪಿ ಮತ್ತು ಸಂಘ ಪರಿವಾರ ಪಾಪ್ಯುಲರ್‌ ಫ್ರಂಟ್‌ ಆಫ್ ಇಂಡಿಯಾ ಸಂಘಟನೆಯನ್ನು ನಿಷೇಧಿಸುವ ಕುರಿತು ಹೋರಾಟ ನಡೆಸುತ್ತಿದ್ದು ಈ ಹೋರಾಟಕ್ಕೆ ಈಗ ಕಾಂಗ್ರೆಸ್‌ ಕೂಡ ಬೆಂಬಲ ನೀಡಿದೆ.

ಹೌದು, ಕೆಪಿಸಿಸಿ ಕಾರ್ಯಧ್ಯಕ್ಷ ದಿನೇಶ್‌ ಗುಂಡು ರಾವ್‌ ಅವರು ಟ್ವೀಟ್‌ ಮಾಡಿ ‘ಧಾರ್ಮಿಕ ಮೂಲಭೂತವಾದಿ ಸಂಘಟನೆಯಾದ ಪಿಎಫ್ಐ ನಂತಹವುಗಳು ದೇಶದ ಭದ್ರತೆಮತ್ತು ಜಾತ್ಯಾತೀತ ವ್ಯವಸ್ಥೆಗೆ ಗೆ ಧಕ್ಕೆ ತರುತ್ತಿವೆ. ಅಂತಹವುಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಕೇಂದ್ರ ಸರ್ಕಾರ ಮುಂದಾಗಬೇಕು’ ಎಂದು ಮನವಿ ಮಾಡಿದ್ದಾರೆ.

ಸಂಘ ಪರಿವಾರದ ಮುಖಂಡರು, ಬಿಜೆಪಿ ನಾಯಕರ ಹತ್ಯೆಗಳಲ್ಲಿ ಪಿಎಫ್ಐ ಸಂಘಟನೆಯ ಪಾತ್ರ ಧೃಡಪಟ್ಟಿರುವ ಹಿನ್ನಲೆಯಲ್ಲಿ ಬ್ಯಾನ್‌ ಮಾಡಬೇಕೆಂದು ಬಿಜೆಪಿ ಹೋರಾಟ ನಡೆಸಿತ್ತು.

-ಉದಯವಾಣಿ

Comments are closed.