ಕರ್ನಾಟಕ

ತಾಯಿಯ ಕಣ್ಣೀರು ಸಹಿಸದ ಮಗ ಮಾಡಿದ್ದೇನು?

Pinterest LinkedIn Tumblr


ಬೆಂಗಳೂರು: ತಂದೆಯ ಜತೆ ಜಗಳವಾಡಿಕೊಂಡು ತಾಯಿ ಅಳುತ್ತಿರುವುದನ್ನು ಸಹಿಸಲಾಗದೇ ಮಗನೋರ್ವ ತಂದೆಯನ್ನು ಅಮಾನುಷವಾಗಿ ಹತ್ಯೆಗೈದ ಹೇಯ ಘಟನೆ ಬೆಂಗಳೂರಿನಲ್ಲಿ ಸುಬ್ರಮಣ್ಯ ನಗರದ ಡಿ. ಬ್ಲಾಕ್‌ನಲ್ಲಿ ನಡೆದಿದೆ.

45 ವರ್ಷದ ಶಿವಶಂಕರ್ ಮಗನಿಂದಲೇ ಕೊಲೆಯಾದ ವ್ಯಕ್ತಿಯಾಗಿದ್ದಾನೆ.

ಘಟನೆಯ ವಿವರ: ಸೋಮವಾರ ರಾತ್ರಿ ಶಿವಶಂಕರ್ ಮತ್ತು ಪತ್ನಿ ಜಯಲಕ್ಷ್ಮಿ ನಡುವೆ ಜಗಳವಾಗಿತ್ತು. ಕೋಪದಲ್ಲಿ ಪತಿ ಪತ್ನಿಗೆ ಹೊಡೆಯಲೆತ್ನಿಸಿದ್ದ. ಅಪ್ಪ- ಅಮ್ಮನ ಜಗಳ ನಡೆಯುವಾಗ ಅಲ್ಲೇ ಇದ್ದ ಪುತ್ರ ರೇವಂತನಿಗೆ ತಾಯಿ ಕಣ್ಣೀರು ಹಾಕುವುದುನ್ನು ನೋಡಿ ಸಹಿಸಲಾಗಿಲ್ಲ. ಸಿಟ್ಟಿಗೆದ್ದ ಆತ ಅಲ್ಲೇ ಇದ್ದ ಚಾಕುವನ್ನು ಎತ್ತಿಕೊಂಡು ತಂದೆ ಎದೆಗೆ ಚುಚ್ಚಿದ್ದಾನೆ. ಪರಿಣಾಮ ಶಿವಶಂಕರ್ ನೆಲಕ್ಕುರುಳಿದ್ದಾನೆ.

ತಕ್ಷಣ ಆತನನ್ನು ಆಸ್ಪತ್ರೆಗೆ ಸೇರಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆತ ದುರ್ಮರವನ್ನಪ್ಪಿದ್ದಾನೆ..

Comments are closed.