ಮನೋರಂಜನೆ

ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ’ಮುಗುಳುನಗೆ’ ಫಸ್ಟ್ ಲುಕ್ ಬಿಡುಗಡೆ

Pinterest LinkedIn Tumblr


ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಯೋಗರಾಜ್ ಭಟ್ ಕಾಂಬಿನೇಷನಲ್‍ನಲ್ಲಿ ಬರುತ್ತಿರುವ ಮುಗುಳುನಗೆ ಚಿತ್ರದ ಫಸ್ಟ್ ಲುಕ್ ಬಿಡುಗಡೆಯಾಗಿದೆ. ಪ್ರೇಮಿಗಳ ದಿನದಂದು ಫಸ್ಟ್ ಲುಕ್ ಬಿಡುಗಡೆ ಮಾಡಿದ್ದು, ಗಣೇಶ್ ಲವರ್ ಬಾಯ್‌ಗಾಗಿ ಕಾಣಿಸಿಕೊಂಡಿದ್ದಾರೆ.

ಅಮೂಲ್ಯಾ, ಆಶಿಕಾ ಮತ್ತು ನಿಖಿತಾ ನಾರಾಯಣ್ ಚಿತ್ರದ ನಾಯಕಿಯರು. ‘ರೋಮಿಯೋ’ ಖ್ಯಾತಿಯ ಭಾವನಾ ರಾವ್ ಅತಿಥಿ ನಟಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಮುಗುಳು ನಗೆ’ಯಲ್ಲಿ ನಿರ್ದೇಶಕ ಯೋಗರಾಜ್ ಭಟ್ ಪ್ರೀತಿಯ ವಿಭಿನ್ನ ಹಂತಗಳನ್ನು ಹೇಳಲಿದ್ದು, ‘ನಗುವಿನ’ ಮೇಲೆಯೇ ಸಿನೆಮಾ ಚಲಿಸಲಿದೆಯಂತೆ. “ಇಂದು, ಪ್ರೀತಿಯ ಬಗೆಗೆ ಪುರುಷನ ದೃಷ್ಟಿಕೋನ ವಯಸ್ಸಿಗೆ ತಕ್ಕಂತೆ ಬದಲಾಗುತ್ತ ಹೋಗುತ್ತದೆ. ಇದನ್ನು ಈ ಸಿನೆಮಾದಲ್ಲಿ ನಾವು ಹುಡುಕಲಿದ್ದೇವೆ” ಎಂದಿದ್ದಾರೆ.

ಈ ಚಿತ್ರದಲ್ಲಿ ಯಾವುದೇ ಪ್ರಮುಖ ಖಳನಾಯಕನಿರದೆ ಇರುವುದು ವಿಶೇಷ. ಕೆಲವು ಪರಿಸ್ಥಿತಿಗಳೇ ಖಳನಾಯಕನ ಪಾತ್ರ ವಹಿಸಲಿವೆಯಂತೆ. ಅಂದಹಾಗೆ ಇದು ಗಣೇಶ್-ಅಮೂಲ್ಯಾ ಜೋಡಿಯ ನಾಲ್ಕನೇ ಸಿನಿಮಾ. ಸದ್ಯಕ್ಕೆ ಫಸ್ಟ್ ಲುಕ್ ನೋಡಿ ಎಂಜಾಯ್ ಮಾಡಿ.

Comments are closed.