ರಾಷ್ಟ್ರೀಯ

ಜಯಲಲಿತಾ ನಿವಾಸವನ್ನು ಸ್ಮಾರಕ ಮಾಡಲು ಜನರಿಂದ ಭಾರಿ ಬೆಂಬಲ

Pinterest LinkedIn Tumblr


ಚೆನ್ನೈ: ತಮಿಳುನಾಡು ಮಾಜಿ ಮುಖ್ಯಮಂತ್ರಿ ದಿ.ಜಯಲಲಿತಾ ಅವರ ಪೋಯಸ್ ಗಾರ್ಡನ್ ನ ಅಧಿಕೃತ ನಿವಾಸ ‘ವೇದ ನಿಲಯಂ’ ಅನ್ನು ಸ್ಮಾರಕ ಮಾಡಬೇಕು ಎಂಬ ಹಂಗಾಮಿ ಮುಖ್ಯಮಂತ್ರಿ ಓ.ಪನ್ನೀರ್ ಸೆಲ್ವಂ ಅವರ ಪ್ರಸ್ತಾವಕ್ಕೆ ಪಕ್ಷದ ಕಾರ್ಯಕರ್ತರಿಂದ ಮತ್ತು ಸಾವರ್ಜನಿಕರಿಂದ ಭಾರಿ ಬೆಂಬಲ ವ್ಯಕ್ತವಾಗಿದೆ.
ಜಯಲಲಿತಾ ಅವರ ಆಶಯದಂತೆ ಅವರ ನಿವಾಸವನ್ನು ಸ್ಮಾರಕ ಮಾಡಲಾಗುವುದು ಎಂದು ಹೇಳಿದ್ದ ಪನ್ನೀರ್ ಸೆಲ್ವಂ ಅವರು, ಈ ಸಂಬಂಧ ಜನಾಭಿಪ್ರಾಯ ಸಂಗ್ರಹಿಸಲು ಸಹಿ ಸಂಗ್ರಹ ಆಂದೋಲನಕ್ಕೆ ಚಾಲನೆ ನೀಡಿದ್ದರು.
ಗ್ರೀನ್ ವೇಸ್ ರಸ್ತೆಯಲ್ಲಿರುವ ಪನ್ನೀರ್ ಸೆಲ್ವಂ ಅವರ ನಿವಾಸದ ಬಳಿ ಭಾರಿ ಸಂಖ್ಯೆಯಲ್ಲಿ ಸಾರ್ವಜನಿಕರು ಮತ್ತು ಪಕ್ಷದ ಕಾರ್ಯಕರ್ತರು ಒಟ್ಟುಗೂಡಿ ಸಹಿ ಸಂಗ್ರಹಿಸುತ್ತಿದ್ದಾರೆ. ಜನ ಇಲ್ಲಿಗೆ ನಿತ್ಯ ಬರುತ್ತಿದ್ದು, ಅವರು ಬೋರ್ಡ್ ಗೆ ಸಹಿ ಮಾಡವ ಮುನ್ನ ಅವರಿಂದ ನಾವು ಕೇವಲ ಅವರ ಹೆಸರು ಮತ್ತು ಮೊಬೈಲ್ ನಂಬರ್ ಮಾತ್ರ ಪಡೆಯುತ್ತಿದವೆ ಎಂದು ಪಕ್ಷದ ಕಾರ್ಯಕರ್ತರು ತಿಳಿಸಿದ್ದಾರೆ.
ನಾನು ಪನ್ನೀರ್ ಸೆಲ್ವಂ ಅವರಿಗೆ ಬೆಂಬಲ ನೀಡಲು ಮತ್ತು ವೇದ ನಿಲಯಂ ಅನ್ನು ಸ್ಮಾರಕ ಮಾಡಲು ಬೆಂಬಲಿಸುವುದಾಗಿ ನಾವು ಇಲ್ಲಗೆ ಬಂದಿದ್ದೇವೆ. ಅಮ್ಮ ವಾಸಿಸುತ್ತಿದ್ದ ವೇದ ನಿಲಯಂ ನಮ್ಮ ಪಾಲಿಗೆ ದೇವಸ್ಥಾನವಿದ್ದಂತೆ. ಅಲ್ಲಿ ಬೆರೆಯವರು ವಾಸಿಸಲು ಅವಕಾಶ ನೀಡಬಾರದು. ಅದನ್ನು ಸ್ಮಾರಕ ಮಾಡಬೇಕು ಎಂದು ಎಐಎಡಿಎಂಕೆಯ ಅರಂತಂಗಿ ಘಟಕದ ನಾಯಕ ಗಣೇಶ್ ಎಂಬುವವರು ಹೇಳಿದ್ದಾರೆ.

Comments are closed.