ಕರ್ನಾಟಕ

ಕಾರ್ಪೊರೇಷನ್ ಬ್ಯಾಂಕ್ ಎಟಿಎಂ ಹಂತಕನ ವಶಕ್ಕೆ ಪೊಲೀಸರ ಯತ್ನ

Pinterest LinkedIn Tumblr


ಬೆಂಗಳೂರು, ಫೆ.೫: ನಗರದ ಕಾರ್ಪೊರೇಷನ್ ಬ್ಯಾಂಕ್ ಎಟಿಎಂ ಘಟಕದಲ್ಲಿ ಜ್ಯೋತಿ ಉದಯ್ ಅವರ ಮೇಲೆ ಮಚ್ಚಿನಿಂದ ನಿರ್ದಯವಾಗಿ ಹಲ್ಲೆ ನಡೆಸಿ ಮೂರು ವರ್ಷಗಳ ಬಳಿಕ ಆಂಧ್ರ ಪೊಲೀಸರಿಗೆ ಸಿಕ್ಕಿಬಿದ್ದಿರುವ ಮಧುಕರ್ ರೆಡ್ಡಿಯನ್ನು ವಶಕ್ಕೆ ಪಡೆಯಲು ನಗರ ಪೊಲೀಸರು ಪ್ರಯತ್ನ ಮುಂದುವರಿಸಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸಿಸಿಬಿ ಪೊಲೀಸರ ತಂಡ ಮದನಪಲ್ಲಿಗೆ ತೆರಳಿದ್ದು, ಬಾಡಿ ವಾರೆಂಟ್ ಮೇಲೆ ಒಪ್ಪಿಸುವಂತೆ ಕೋರಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಮದನಪಲ್ಲಿಯ ಪಿಲೇರು ಎಂಬಲ್ಲಿನ ನ್ಯಾಯಾಧೀಶರ ಮುಂದೆ ಆರೋಪಿಯನ್ನು ಇಂದು ಹಾಜರುಪಡಿಸಲಾಗುತ್ತದೆ. ಅಲ್ಲಿ ಬಾಡಿ ವಾರೆಂಟ್ ಮೇಲೆ ವಶಕ್ಕೆ ಪಡೆಯಲು ಪ್ರಯತ್ನಿಸಲಾಗುವುದು ಎಂದು ಮೂಲಗಳು ನಡೆಯಿದೆ.
ಮೊದಲ ಮದನಪಲ್ಲಿ ಪೊಲೀಸರು ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಿದ್ದಾರೆ. ಬಳಿಕ ನಗರ ಪೊಲೀಸರಿಗೆ ಹಸ್ತಾಂತರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಚಿತ್ತೂರು ಜಿಲ್ಲೆಯ ಮುದ್ದಲದೊಡ್ಡಿ ಗ್ರಾಮದವನಾದ ಆರೋಪಿ. ೨೦೧೩ರ ನ.೧೧ರಂದು ಧರ್ಮಾವರಂನಲ್ಲಿ ಪ್ರಮೀಳಾ ಎಂಬವರನ್ನು ಹತ್ಯೆಗೈದು ತಪ್ಪಿಸಿಕೊಳ್ಳುವ ಉದ್ದೇಶದಿಂದ ಬೆಂಗಳೂರಿಗೆ ಬಂದು ಕಾರ್ಪೋರೇಷನ್ ಬಳಿ ಎಟಿಎಂನಲ್ಲಿ ಈ ಕೃತ್ಯ ನಡೆಸಿದ್ದ.
ಘಟನೆ ದಿನ ಎಟಿಎಂ ಘಟಕದ ಶೆಟರ್ ಮೇಲೆ ಮೂಡಿದ್ದ ಆರೋಪಿಯ ಬೆರಳಚ್ಚನ್ನು ಸಂಗ್ರಹಿಸಿಕೊಳ್ಳಲಾಗಿತ್ತು. ಈಗ ಆ ಬೆರಳಚ್ಚು ತೆಗೆದುಕೊಂಡು ಸಿಬ್ಬಂದಿ ಆಂಧ್ರಕ್ಕೆ ತೆರಳಿದ್ದಾರೆ. ಆ ಮುದ್ರೆ ಹೋಲಿಕೆಯಾದರೆ, ನ್ಯಾಯಾಲಯದ ಅನುಮತಿ ಪಡೆದು ಆರೋಪಿಯನ್ನು ನಗರಕ್ಕೆ ಕರೆತರುತ್ತೇವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಅದೇ ರೀತಿ ಹೈದರಾಬಾದ್, ಅನಂತಪುರ ಪೊಲೀಸರು ಕೂಡ ಆತನನ್ನು ವಶಕ್ಕೆ ಪಡೆಯಲು ಮುಂದಾಗಿದ್ದಾರೆ.

Comments are closed.