ರಾಷ್ಟ್ರೀಯ

ಪನ್ನೀರ್ ಸೆಲ್ವಂ ರಾಜೀನಾಮೆ: ಶಶಿಕಲಾಗೆ ಮುಖ್ಯಮಂತ್ರಿ ಪದವಿ

Pinterest LinkedIn Tumblr

ಚೆನ್ನೈ: ಇಂದು ನಡೆದ ಎಐಎಡಿಎಂಕೆ ಪಕ್ಷದ ಶಾಸಕರ ಸಭೆಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿ ಶಶಿಕಲಾ ನಟರಾಜನ್‌ ಅವರನ್ನು ತಮಿಳುನಾಡು ಮುಖ್ಯಮಂತ್ರಿಯನ್ನಾಗಿ ನೇಮಕ ಮಾಡಲು ತೀರ್ಮಾನಿಸಲಾಗಿದೆ.

ಈ ಸಭೆಯಲ್ಲಿ ತಮಿಳುನಾಡು ಮುಖ್ಯಮಂತ್ರಿ ಒ. ಪನ್ನೀರ್‍‌ಸೆಲ್ವಂ ಕೂಡಾ ಭಾಗವಹಿಸಿದ್ದರು.

ಪೋಯಸ್ ಗಾರ್ಡನ್‍ನಲ್ಲಿರುವ ಶಶಿಕಲಾ ಅವರ ನಿವಾಸದಲ್ಲಿ ಎಐಎಡಿಎಂಕೆ ಪಕ್ಷದ ಶಾಸಕರು ಸಭೆ ಸೇರಿದ್ದರು. ಈ ಸಭೆಯಲ್ಲಿ ಪನ್ನೀರ್‍ ಸೆಲ್ವಂ ಅವರೇ ಶಶಿಕಲಾ ಅವರನ್ನು ಎಐಎಡಿಎಂಕೆ ಶಾಸಕಾಂಗ ಪಕ್ಷದ ನಾಯಕಿಯನ್ನಾಗಿ ನಾಮ ನಿರ್ದೇಶನ ಮಾಡಿದ್ದಾರೆ.

ಸಭೆ ಸೇರಿ 20 ನಿಮಿಷಗಳಲ್ಲಿಯೇ ಶಶಿಕಲಾ ಅವರನ್ನು ಮುಖ್ಯಮಂತ್ರಿ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು.

ಫೆ. 7 ಅಥವಾ 8 ರಂದು ಶಶಿಕಲಾ ಅವರು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆ ಇದೆ ಎಂದು ಬಲ್ಲಮೂಲಗಳು ಹೇಳಿವೆ.

ತಮಿಳುನಾಡು ರಾಜ್ಯ ರಾಜಕಾರಣದಲ್ಲಿನ ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿ ಕಾಂಗ್ರೆಸ್ ಪಕ್ಷದ ವಕ್ತಾರ, ಶಶಿಕಲಾ ಅವರನ್ನು ಸಿಎಂ ಆಗಿ ನೇಮಕ ಮಾಡಿರುವುದು ತಮಿಳುನಾಡಿನ ರಾಜಕೀಯದಲ್ಲಿ ಕರಾಳ ದಿನವಾಗಿದೆ. ಇಲ್ಲಿನ ಜನರು ಶಶಿಕಲಾ ಅವರನ್ನು ಎಂದಿಗೂ ಮುಖ್ಯಮಂತ್ರಿಯಾಗಿ ಸ್ವೀಕರಿಸುವುದಿಲ್ಲ ಎಂದಿದ್ದಾರೆ.

ಅಮ್ಮ ನಿಧನರಾದಾಗ ಎಐಎಡಿಎಂಕೆ ಪಕ್ಷದ ಚುಕ್ಕಾಣಿ ಹಿಡಿಯುಂತೆ ಪನ್ನೀರ್ ಸೆಲ್ವಂ ಅವರೇ ನನಗೆ ಒತ್ತಾಯಿಸಿದ್ದರು ಎಂದು ಶಶಿಕಲಾ ಹೇಳಿದ್ದಾರೆ.

Comments are closed.