ಕರ್ನಾಟಕ

ಅಳಿಯ ಸಿದ್ದಾರ್ಥನ ಅಕ್ರಮ ಆಸ್ತಿ ಉಳಿಸಲು ಎಸ್.ಎಂ.ಕೃಷ್ಣ ನಾಟಕ: ಎಸ್.ಆರ್ ಹಿರೇಮಠ್

Pinterest LinkedIn Tumblr


ಹುಬ್ಬಳ್ಳಿ: ಅಳಿಯನ ಅಕ್ರಮ ಆಸ್ತಿ ಉಳಿಸಲು ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ರಾಜೀನಾಮೆ ನಾಟಕವಾಡುತ್ತಿದ್ದಾರೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್ ಗಂಭೀರವಾಗಿ ಆರೋಪಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಎಸ್.ಎಂ.ಕೃಷ್ಣ ಇಳಿವಯಸ್ಸಿನಲ್ಲಿ ರಾಜಕೀಯ ನಾಟಕವಾಡುತ್ತಿದ್ದಾರೆ. ಅವರ ಅಳಿಯ ಸಿದ್ಧಾರ್ಥ ಅಕ್ರಮ ಆಸ್ತಿ ರಕ್ಷಿಸುವ ಉದ್ದೇಶದಿಂದ ಪಕ್ಷಾಂತರದ ನಾಟಕವಾಡುತ್ತಿದ್ದಾರೆ. ಕೃಷ್ಣ ಅವರ ಇಂತಹ ನಡೆಯನ್ನು ಈ ಹಿಂದೆ ಬಿ.ಎಸ್.ಯಡಿಯೂರಪ್ಪ ಹಾಗೂ ಜಯಲಲಿತಾ ಅವರು ಅನುಸರಿಸಿದ್ದರು.

ಕೃಷ್ಣ ಅವರ ನಡೆ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ಗುರಿ ಹೊಂದಿದ್ದಾರೆ. ಇಳಿವಯಸ್ಸಿನ ಸಮಯಾವಕಾಶ ಬಳಸಿಕೊಂಡು ತಮ್ಮ ಅಳಿಯ ಸಿದ್ದಾರ್ಥ ಅವರ ಅಕ್ರಮ ಆಸ್ತಿ ಉಳಿಸಿಕೊಳ್ಳಲು ತಂತ್ರ ರೂಪಿಸಿದ್ದಾರೆ ಎಂದು ಸಮಾಜ ಪರಿವರ್ತನಾ ಸಮುದಾಯದ ಮುಖ್ಯಸ್ಥ ಎಸ್.ಆರ್.ಹಿರೇಮಠ್ ದೂರಿದ್ದಾರೆ.

ಸಿಎಂ ಸಿದ್ದರಾಮಯ್ಯ ವಿರುದ್ಧ ಬಂಡೆದ್ದ ಹಿರಿಯ ನಾಯಕ ಎಸ್.ಎಂ.ಕೃಷ್ಣ ಅವರು ಜನವರಿ 28ರಂದು ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದ್ದರು.

Comments are closed.