ರಾಷ್ಟ್ರೀಯ

ಏಡ್ಸ್‌ಗೆ ಚಿಕಿತ್ಸೆ:ವೈದ್ಯನಿಗೆ ದಂಡ ವಿಧಿಸಿದ ರಾಜಸ್ತಾನ ಗ್ರಾಹಕರ ನ್ಯಾಯಾಲಯ

Pinterest LinkedIn Tumblr


ಉದಯ್‌ಪುರ್, ಫೆ. ೪- ಹೆಚ್.ಐ.ವಿ. ಸೋಂಕನ್ನು ಸರಿಯಾಗಿ ಪರೀಕ್ಷಿಸಿ ಕಾಯಿಲೆಯನ್ನು ಖಚಿತಪಡಿಸಿಕೊಳ್ಳದೆ ಚಿಕಿತ್ಸೆಗೆ ಒಳಪಡಿಸಿದ್ದ ವ್ಯಕ್ತಿಗೆ ಪರಿಹಾರ ನೀಡಲು, ರಾಜಸ್ತಾನ ಗ್ರಾಹಕರ ನ್ಯಾಯಾಲಯ ವೈದ್ಯನಿಗೆ ಆದೇಶಿಸಿದೆ.

ರೋಗವನ್ನು ಗುರುತಿಸದೆ ಚಿಕಿತ್ಸೆ ನೀಡಿದ ವೈದ್ಯರಿಗೆ ವೈದ್ಯಕೀಯ ನಿರ್ಲಕ್ಷೆ ಆರೋಪದಡಿ ರೋಗಿಗೆ 5 ಲಕ್ಷ ರೂ. ಪರಿಹಾರ ನೀಡಲು ಆದೇಶಿಸಿದೆ.

ಧನರಾಜ್ ಪಟೇಲ್ ಎಂಬ ವ್ಯಕ್ತಿ ಇಲ್ಲಿಯ ಎಂ.ಬಿ. ಸರ್ಕಾರಿ ಆಸ್ಪತ್ರೆಗೆ ಚಳಿ, ಜ್ವರ, ನೆಗಡಿ ತೋರಿಸಿಕೊಳ್ಳಲು ಬಂದಿದ್ದಾರೆ. ಇವರನ್ನು ಪರೀಕ್ಷಿಸಿದ ವೈದ್ಯ ಡಾ. ಡಿ.ಸಿ.ಕುಮಾವತ್, ಇವರನ್ನು ಹೆಚ್.ಐ.ವಿ.ರೋಗಿ ಎಂದು ಶಂಕಿಸಿದ್ದಾರೆ. ಹಾಗೂ ಆ ರೋಗಕ್ಕೆ ಚಿಕಿತ್ಸೆ ಪ್ರಾರಂಭಿಸಿದ್ದಾರೆ.

ಚಿಕಿತ್ಸೆ ಪಡೆಯುವ ಮಧ್ಯದಲ್ಲಿಯೇ, ರೋಗಿ ಪಟೇಲ್ ಮುಂಬೈ ಆಸ್ಪತ್ರೆಯೊಂದರಲ್ಲಿ ಇದನ್ನು ಪರೀಕ್ಷಿಸಿ ಕೊಂಡಿದ್ದಾರೆ. ಹೆಚ್.ಐ.ವಿ. ಇಲ್ಲ ಎಂದು ವೈದ್ಯಕೀಯ ವರದಿ ಹೇಳಿದೆ.

ಆ ವರದಿಯನ್ನು ತಂದು ಸದರಿ ವೈದ್ಯರಿಗೆ ತೋರಿಸಿದರೂ, ಪ್ರಯೋಜನವಾಗದೆ ಚಿಕಿತ್ಸೆಯನ್ನು ಮುಂದುವರೆಸಿದ್ದಾರೆ. ಚಿಕಿತ್ಸೆ 1 ವರ್ಷಗಳ ಕಾಲ ನ‌ಡೆದಿದೆ. ಈ ಅವಧಿಯಲ್ಲಿ ತಪ್ಪು ಚಿಕಿತ್ಸೆಯಿಂದಾಗಿ ರೋಗಿ ಪಟೇಲ್‌ರ ಆರೋಗ್ಯ ತುಂಬ ಹದಗೆಟ್ಟಿದೆ. ದೂರನ್ನು ದಾಖಲಿಸಿಕೊಂಡಿದ್ದ ಗ್ರಾಹಕರ ನ್ಯಾಯಾಲಯ ತಪ್ಪು ಚಿಕಿತ್ಸೆ ನೀಡಿದ್ದ ವೈದ್ಯರಿಗೆ, ವೈದ್ಯಕೀಯ ವಿಮಾ ಸಂಸ್ಥೆಗೆ 5 ಲಕ್ಷ ರೂ. ಪರಿಹಾರ ನೀಡಲು ಆದೇಶಿಸಿದೆ.

Comments are closed.