ಕರ್ನಾಟಕ

ಕುಟುಂಬಸ್ಥರಿಂದ ಯುವಕನನ್ನು ಕಳೆದ ಮೂರು ವರ್ಷದಿಂದ ಊರ ಹೊರಗಿನ ತೋಟದಲ್ಲಿ ಬಂಧನ

Pinterest LinkedIn Tumblr


ಬೆಳಗಾವಿ(ಫೆ.08): ಆತನಿಗೆ 34 ವರ್ಷ, ತಾಯಿ ಮತ್ತು ಸೋದರರು ಚಿಕಿತ್ಸೆ ಕೊಡಿಸದ ಆಸ್ಪತ್ರೆಗಳೇ ಇಲ್ಲ. ಆದರೂ ಯಾವುದೇ ಪ್ರಯೋಜನ ಆಗಿಲ್ಲ. ಇದರಿಂದ ರೋಸಿ ಹೋದ ಕುಟುಂಬಸ್ಥರು ಏನು ಮಾಡಿದ್ದಾರೆ ಅಂತ ನೋಡಿದರೆ ಕರಳು ಹಿಂಡಿ ಬರುತ್ತದೆ. ಅಷ್ಟಕ್ಕೂ ಅವರೇನು ಮಾಡಿದರು ಅಂತೀರಾ? ಹಾಗಾದರೆ ಈ ಸ್ಟೋರಿ ಓದಿ.
ಭೀಮಪ್ಪ ಪಿಡಾಯಿ ಬೆಳಗಾವಿಯ ರಾಯಭಾಗ ತಾಲೂಕಿನ ಕಟಕಭಾವಿಯವನು. 12 ವರ್ಷಗಳಿಂದ ಈತ ಮಾನಸಿಕ ರೋಗದಿಂದ ಬಳಲುತ್ತಿರುವ ಭೀಮಪ್ಪ ಕಳೆದ ಮೂರು ವರ್ಷಗಳಿಂದ ಊರ ಹೊರಗಿನ ತೋಟದಲ್ಲಿ ಜೀವಿಸುತ್ತಿದ್ದಾನೆ. ಮಳೆ, ಚಳಿ ಏನೇ ಬಂದರೂ ಕೇವಲ ಗಿಡವೇ ಭೀಮಪ್ಪನಿಗೆ ಆಸರೆ.
ದಾರಿಹೋಕರ ಮೇಲೆ ಈತ ಹಲ್ಲೆ ಮಾಡುತ್ತಾನಂತೆ. ಮಹಿಳೆಯರು, ಮಕ್ಕಳ ಮೇಲೂ ಕಲ್ಲು ಎಸೆಯುತ್ತಾನಂತೆ. ಹೀಗಾಗಿ ಊರಿನ ಜನರೇ ಹಲವು ಸಲ ಭೀಮಪ್ಪನನ್ನ ಹಿಡಿದು ಥಳಿಸಿದ್ದಾರೆ. ಇದರಿಂದ ಬೇಸತ್ತು ಮನೆಯವರೇ ಕೈ-ಕಾಲುಗಳಿಗೆ ಸಂಕೋಲೆಯಿಂದ ಬಂಧಿಸಿ ಇಟ್ಟಿದ್ದಾರೆ.
ಭೀಮಪ್ಪನಿಗೆ ಕುಟುಂಬಸ್ಥರು ತೋರಿಸದ ಆಸ್ಪತ್ರೆಗಳಿಲ್ಲ. ಆದರೆ, ಬಡತನ ಹೆಚ್ಚಿನ ಚಿಕಿತ್ಸೆಗೆ ಅಡ್ಡಿಯಾಗಿದೆ. ಒಟ್ಟಿನಲ್ಲಿ ಭೀಮಪ್ಪನ ಈ ರೋಗ ಹಾಗೂ ಸಂಕೋಲೆಯಿಂದ ಮುಕ್ತಿ ಕೊಡಿಸಲು ಸರ್ಕಾರ ಮುಂದಾಗಬೇಕಿದೆ.

Comments are closed.