ರಾಷ್ಟ್ರೀಯ

ತಮಿಳುನಾಡಿನಲ್ಲಿ ಪೆಟಾ ನಿಷೇಧಕ್ಕೆ ಆಗ್ರಹ

Pinterest LinkedIn Tumblr
16/

ಚೆನ್ನೈ, ಫೆ. ೩- ತನ್ನ ವೆಬ್‌ಸೈಟ್‌ನಲ್ಲಿ ಲೈಂಗಿಕ ವಿಕೃತಿಯ ಅಶ್ಲೀಲ ಚಿತ್ರಗಳನ್ನು, ವಿಚಾರಗಳನ್ನು ತೋರಿಸುತ್ತಿರುವ ಪ್ರಾಣಿಗಳ ದಯಾ ಸಂಘ ಪೆಟಾವನ್ನು ನಿಷೇಧಿಸುವಂತೆ ತಮಿಳುನಾಡು ಮಕ್ಕಳ ಹಕ್ಕುಗಳ ಸಮಿತಿ ಸರ್ಕಾರವನ್ನು ಆಗ್ರಹಿಸಿದೆ.
ತಮಿಳುನಾಡಿನಲ್ಲಿ ಇತ್ತೀಚೆಗೆ ವಿವಾದಕ್ಕೊಳಗಾಗಿದ್ದ ಗೂಳಿ ಕಾಳಗ ಜಲ್ಲಿಕಟ್ಟನ್ನು ನಿಷೇಧಿಸುವಂತೆ ಪೆಟಾ ಸುಪ್ರೀಂಕೋರ್ಟಿಗೆ ಹೋಗಿದ್ದನ್ನು ಇಲ್ಲಿ ಸ್ಮರಿಸಬಹುದು.
ಪೀಪಲ್ ಫಾರ್ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಅನಿಮಲ್ ಪೆಟಾ ತನ್ನ ವೆಬ್‌ಸೈಟ್‌ನಲ್ಲಿ ಪ್ರಖ್ಯಾತ ಮಹಿಳೆಯರ ಬೆತ್ತಲೆ ಚಿತ್ರಗಳನ್ನು ಭಾರತೀಯ ಕಾನೂನಿಗೆ ವಿರುದ್ಧವಾಗಿ ಹಾಕಿಕೊಂಡಿದೆ ಎಂದು ಮಕ್ಕಳ ಹಕ್ಕು ಸಂಸ್ಥೆ ಆಪಾದಿಸಿದೆ.
ಈ ಸಂಬಂಧ ಸೂಕ್ತ ಕ್ರಮ ಕೈಗೊಳ್ಳುವಂತೆ ತಮಿಳುನಾಡು ಮಕ್ಕಳ ಹಿತ ರಕ್ಷಣಾ ಸಮಿತಿ ಶಿಫಾರಸು ಮಾಡಿದೆಯೆಂದು ಅದರ ಸದಸ್ಯರೊಬ್ಬರು ಹೇಳಿದ್ದಾರೆ.
* ಪೆಟಾದ ಉದ್ದೇಶ ಈಡೇರಿಕೆಗಾಗಿ ಬಳಸುವ ಇಂತಹ ಅಶ್ಲೀಲ ಚಿತ್ರಗಳು ಮಕ್ಕಳ ಮನಸ್ಸಿನ ಮೇಲೆ ಗಂಭೀರ ಪರಿಣಾಮ ಉಂಟು ಮಾಡುತ್ತವೆ ಎಂದು ಅವರು ಹೇಳಿದ್ದಾರೆ.
* ಪೆಟಾ ಜಗತ್ತಿನಾದ್ಯಂತ ಕಾರ್ಯ ಚಟುವಟಿಕೆ ನಡೆಸುತ್ತಿದ್ದು, ಹಾಲಿವುಡ್ ನಟಿಯರೂ ಸೇರಿದಂತೆ ಅನೇಕ ಪ್ರಸಿದ್ಧ ಮಹಿಳಾ ಮಣಿಗಳು ಇದರ ರಾಯಭಾರಿಗಳಾಗಿ ಪ್ರಾಣಿಗಳಿಗಾಗಿ ಅನೇಕ ಬೆತ್ತಲೆ ಹೋರಾಟಗಳನ್ನು ಮಾಡಿದ್ದಾರೆ. ಬೆತ್ತಲೆ ಜಾಹೀರಾತುಗಳನ್ನು ಈ ಸಂಘ ಆಗಾಗ ನೀಡಿ ಅನೇಕ ಟೀಕೆಗಳಿಗೆ ಒಳಗಾಗಿದೆ.

Comments are closed.