ಮೀರಠ್, ಉತ್ತರ ಪ್ರದೇಶ (ಫೆ.03): ಉತ್ತರ ಪ್ರದೇಶದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಯುವತಿಯರನ್ನು ಚುಡಾಯಿಸುವ ರೋಮಿಯೋಗಳಿಗೆ ಬುದ್ದಿ ಕಲಿಸಲು ರೋಮಿಯೋ ನಿಗ್ರಹ ದಳಗಳನ್ನು ರಚಿಸುವುದಾಗಿ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ.
ಸಮಾಜವಾದಿ ಪಕ್ಷದ ಆಡಳಿತಾವಧಿಯಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದೆಗೆಟ್ಟಿದ್ದು, ಕಿಡಿಗೇಡಿಗಳಿಗೆ ಯಾವುದೇ ರೀತಿಯ ಭಯವಿಲ್ಲವಾಗಿದೆ, ಎಂದು ಮೀರಠ್’ನಲ್ಲಿ ಚುನಾವಣಾ ಸಭೆಯನ್ನುದ್ದೇಶಿ ಅಮಿತ್ ಶಾ ಹೇಳಿದ್ದಾರೆ.
ಹೆಣ್ಮಕ್ಕಳು ಯಾವುದೇ ಭಯಾತಂಕಗಳಿಲ್ಲದೇ ವಿದ್ಯಾಭ್ಯಾಸ ನಡೆಸುವಂತಾಗಲು ಪ್ರತಿ ಕಾಲೇಜಿಗೂ ಒಂದು ರೋಮಿಯೋ ನಿಗ್ರಹ ದಳವನ್ನು ನಿಯೋಜಿಸಲಾಗುವುದೆಂದು ಶಾ ಹೇಳಿದ್ದಾರೆ.
ರಾಷ್ಟ್ರೀಯ
Comments are closed.