ಕರ್ನಾಟಕ

ಹಾಡುಹಗಲೇ ಎಪಿಎಂಪಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಗುಂಡು

Pinterest LinkedIn Tumblr


ಬೆಂಗಳೂರು,ಫೆ.೩-ಯಲಹಂಕದ ಕೋಗಿಲು ಕ್ರಾಸ್‌ನ ಸಿಗ್ನಲ್ ಬಳಿ ಕಾರಿನಲ್ಲಿ ಕುಳಿತಿದ್ದ ದಾಸನಪುರ ಕೃಷಿ ಉತ್ಪನ್ನ ಮಾರುಕಟ್ಟೆ(ಎಪಿಎಂಸಿ)ಸಮಿತಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಅಲಿಯಾಸ್ ಡಾಬಾ ಸೀನನ ಮೇಲೆ ಹಾಡುಹಗಲೇ ಗುಂಡು ಹಾರಿಸಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಪಲ್ಸರ್ ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಏಕಾಎಕಿ ಏಳು ಸುತ್ತು ಹಾರಿಸಿದ ಗುಂಡು ತಗುಲಿ ಶ್ರೀನಿವಾಸ್ ಹಾಗೂ ಅವರ ಕಾರು ಚಾಲಕ ಮೂರ್ತಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಗಾಯಗೊಂಡ ಅವರನ್ನು ತಕ್ಷಣವೇ ಹೆಬ್ಬಾಳದ ಕೊಲಂಬಿಯಾ ಏಷಿಯಾ ಆಸ್ಪತ್ರೆಗೆ ದಾಖಲಿಸಲಾಗಿದ್ದು ಶ್ರೀನಿವಾಸ್ ಸ್ಥಿತಿ ಚಿಂತಾಜನಕವಾಗಿದ್ದರೆ,ಕಾರು ಚಾಲಕ ಮೂರ್ತಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಯಲಹಂಕದ ಕೋಗಿಲು ಕ್ರಾಸ್‌ನ ಸಿಗ್ನಲ್ ಬಳಿ ಮಧ್ಯಾಹ್ನ ೧೨ರ ವೇಳೆ ಸರ್ಕಾರಿ ಹೊಂಡಾ ಸಿಟಿ ಕಾರು ನಿಲ್ಲಿಸಿಕೊಂಡು ಅದರಲ್ಲಿ ಕಡಬಗೆರೆ ಶ್ರೀನಿವಾಸ್ ಹಾಗೂ ಚಾಲಕ ಮೂರ್ತಿ ಕುಳಿತುಕೊಂಡಿದ್ದರು ಈ ವೇಳೆ ಪಲ್ಸರ್ ಬೈಕ್‌ನಲ್ಲಿ ಇಬ್ಬರು ದುಷ್ಕರ್ಮಿಗಳು ಏಕಾಎಕಿ ರಿವಾಲ್ವಾರ್‌ನಿಂದ ಗುಂಡು ಹಾರಿಸಿ ಪರಾರಿಯಾಗಿದ್ದಾರೆ.
ದುಷ್ಕರ್ಮಿಗಳು ಏಳು ಸುತ್ತು ಗುಂಡು ಹಾರಿಸಿದ್ದು ಅದರಲ್ಲಿ ಐದು ಗುಂಡುಗಳು ಕಾರಿನ ಗಾಜು ಸೀಳಿ ಹೊರಬಂದಿದ್ದು ಉಳಿದ ಎರಡು ಗುಂಡುಗಳು ಕಡಬಗೆರೆ ಶ್ರೀನಿವಾಸ್ ಹಾಗೂ ಚಾಲಕ ಮೂರ್ತಿಗೆ ತಗುಲಿದ್ದು ಇಬ್ಬರೂ ಗಂಭೀರವಾಗಿ ಗಾಯಗೊಂಡಿದ್ದಾರೆ.
ಹಳೆಯ ದ್ವೇಷದ ಹಿನ್ನಲೆಯಲ್ಲಿ ದುಷ್ಕರ್ಮಿಗಳು ಈ ಕೃತ್ಯವೆಸಗಿದ್ದಾರೆ ಎಂದು ಮೆಲ್ನೋಟಕ್ಕೆ ತಿಳಿದುಬಂದಿದ್ದು ಸ್ಥಳಕ್ಕೆ ಭೇಟಿ ನೀಡಿರುವ ನಗರ ಪೊಲೀಸ್ ಆಯುಕ್ತ ಪ್ರವೀಣ್ ಸೂದ್ ಹೆಚ್ಚುವರಿ ಪೊಲೀಸ್ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ ಡಿಸಿಪಿ ಡಾ.ಪಿ.ಎಸ್.ಹರ್ಷ ಅವರು ಪರಿಶೀಲನೆ ನಡೆಸಿದ್ದಾರೆ.
ಯಲಹಂಕ ಪೊಲೀಸರು ಪ್ರಕರಣ ದಾಖಲಿಸಿ ದುಷ್ಕರ್ಮಿಗಳಿಗಾಗಿ ತೀವ್ರ ಶೋಧ ನಡೆಸಿದ್ದಾರೆ.
ಬಿಜೆಪಿಯಲ್ಲಿದ್ದ ಕಡಬಗೆರೆಯ ಶ್ರೀನಿವಾಸ್ ಹಿಂದೆ ಶಾಸಕ ವಿಶ್ವನಾಥ್ ಅವರ ಅಪ್ತನಾಗಿದ್ದನು, ಕೆಲ ದಿನಗಳ ಹಿಂದೆ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಆತ ಅಪರಾಧ ಚಟುವಟಿಕೆಯಲ್ಲಿ ತೊಡಗಿದ್ದು ಕುಖ್ಯಾತ ರೌಡಿ ಮಾದನಾಯ್ಕನಹಳ್ಳಿಯ ಪಾಯ್ಸನ್ ರಾಮನ ಸಹೋದರನಾಗಿದ್ದನು.
ಎರಡು ಬಾರಿ ಎಪಿಎಂಸಿ ಸದಸ್ಯನಾಗಿದ್ದ ಆತ ಇತ್ತೀಚಿಗೆ ಎಪಿಎಂಸಿ ಅಧ್ಯಕ್ಷನಾಗಿ ಆಯ್ಕೆಯಾಗಿದ್ದ ಶ್ರೀನಿವಾಸ್ ಹಲವು ವಿರೋಧಿಗಳಿದ್ದರು.ಹಳೆದ್ವೇಷದ ಹಿನ್ನಲೆಯಲ್ಲಿ ಆತನ ವಿರೋಧಿಗಳೇ ಶ್ರೀನಿವಾಸ್ ಕೊಲೆಗೆ ಸಂಚು ರೂಪಿಸಿ ಗುಂಡು ಹಾರಿಸಿ ಪರಾರಿಯಾಗಿದ್ದಾರೆ.

FacebookGoogle+WhatsAppGoogle GmailShare

Comments are closed.