ಕರ್ನಾಟಕ

ನೀರು ಹಿಡಿಯುವ ವಿಚಾರದಲ್ಲಿ ಕೊಲೆ: ಆರೋಪಿಗೆ ಜೀವಾವಧಿ

Pinterest LinkedIn Tumblr


ತುಮಕೂರು, ಫೆ. ೧- ನೀರು ಹಿಡಿಯುವ ವಿಚಾರದಲ್ಲಿ ಗಲಾಟೆ ನಡೆದು ಮಹಿಳೆಯನ್ನು ಕೊಲೆಗೈದಿದ್ದ ಆರೋಪಿಗೆ ಇಲ್ಲಿನ 3ನೇ ಅಧಿಕ ಜಿಲ್ಲಾ ಸೆಷನ್ಸ್ ನ್ಯಾಯಾಲಯ ಜೀವಾವಧಿ ಶಿಕ್ಷೆ ಹಾಗೂ 2 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಮಧುಗಿರಿ ಉಪವಿಭಾಗದ ಕೊಡಿಗೇನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ತೆರಿಯೂರು ಗ್ರಾಮದಲ್ಲಿ 2014ರ ಅ.23 ರಂದು ಸಾರ್ವಜನಿಕ ನಲ್ಲಿಯ ಬಳಿ ನೀರು ಹಿಡಿಯುವ ವಿಚಾರಕ್ಕೆ ಪರಿಶಿಷ್ಟ ವರ್ಗದ ಅಂಜಮ್ಮ, ಸವರ್ಣೀಯ ಜನಾಂಗದ ರಾಮಾಂಜಿನಪ್ಪ ನಡುವೆ ಗಲಾಟೆ ನಡೆದಿತ್ತು.
ಅಂದು ಮಧ್ಯರಾತ್ರಿ ಅಂಜಮ್ಮ ಅವರ ಮನೆಗೆ ನುಗ್ಗಿದ ಆರೋಪಿ ರಾಮಾಂಜಿನಪ್ಪ ಜಾತಿ ನಿಂದನೆ ಮಾಡಿ, ಮರದ ಕುಂ‌ಟೆಯಿಂದ ಹೊಡೆದು ಹತ್ಯೆ ಮಾಡಿದ್ದ. ಆರೋಪಿ ಕೊಲೆ ಮಾಡಿರುವುದು ತನಿಖೆಯಿಂದ ದೃಢಪಟ್ಟಿತ್ತು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕೊಡಿಗೇನಹಳ್ಳಿ ಪೊಲೀಸರು ಆರೋಪಿ ವಿರುದ್ದ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಪ್ರಕರಣದ ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಪಿ.ಟಿ.ಕಟ್ಟಿಮನಿ ಅವರು ಆರೋಪಿಗೆ ಜೀವಾವಧಿ ಶಿಕ್ಷೆ, ಪರಿಶಿಷ್ಟ ಜಾತಿ ಮತ್ತು ಪಂಗಡದ ದೌರ್ಜನ್ಯ ನಿಯಂತ್ರಣ ಕಾಯ್ದೆಯ 6 ತಿಂಗಳ ಸಾದಾ ಸಜೆ, 2 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಅಮರೇಗೌಡ ವಾದ ಮಂಡಿಸಿದ್ದರು

Comments are closed.