ಕರ್ನಾಟಕ

ಬಿಪಿಎಲ್ ಕಾರ್ಡಗೆ ತೊಗರಿ, ಹೆಸರುಬೆಳೆ; ಖಾದರ್

Pinterest LinkedIn Tumblr


ಹುಬ್ಬಳ್ಳಿ, ಜ. ೨೭- ಬಿಪಿಎಲ್ ಪಡಿತರದಾರರಿಗೆ ತೊಗರಿ, ಹೆಸರುಬೆಳೆ ಸೇರಿದಂತೆ ಪ್ರೋಟಿನಯುಕ್ತ ಧಾನ್ಯಗಳನ್ನು ನೀಡಲಾಗುವುದೆಂದು ಆಹಾರ ಸಚಿವ ಯು.ಟಿ.ಖಾದರ್ ಇಂದಿಲ್ಲಿ ಹೇಳಿದರು.
ನಗರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿಕಾರ್ಡಿಗೆ 1 ಕೆ.ಜಿ ದ್ವಿದಳ ಧಾನ್ಯ ಸೇರಿದಂತೆ ತೊಗರಿ, ಹೆಸರುಬೆಳೆ ನೀಡಲು ಸರಕಾರ ಚಿಂತನೆ ನಡೆಸಿದೆ ಎಂದರು. ಪಡಿತರದಾರರಿಗೆ ಆಹಾರ ಧಾನ್ಯದ ಬದಲು ಹಣ ನೀಡುವ ಕುರಿತಂತೆ ಅಂತಿಮ ನಿರ್ಧಾರವಾಗಿಲ್ಲವೆಂದು ಅವರು ಸ್ಪಷ್ಟಪಡಿಸಿದರು.
ಆಹಾರಧಾನ್ಯದ ಬದಲಿಗೆ ಹಣ ನೀಡುವ ಕುರಿತಂತೆ ಸಾಧಕ-ಬಾಧಕ ಚರ್ಚಿಸಿ ಮುಖ್ಯಮಂತ್ರಿಗಳ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದ ಅವರು, ದೇಶದಲ್ಲಿ ಪ್ರಥಮ ಬಾರಿಗೆ ರಾಜ್ಯದಲ್ಲಿ ಪಾಸ್ ಪೋರ್ಟ್‌ಗಿಂತಲೂ ವೇಗವಾಗಿ ಪಡಿತರ ಚೀಟಿಗಳು ಮನೆ ಬಾಗಿಲಿಗೆ ಬರಲಿವೆ. ರಾಜ್ಯಾದ್ಯಂತ ರೇಶನ್ ಕೊರತೆಯಿಲ್ಲ ಎಂದು ಹೇಳಿದರು.
ಪಡಿತರ ಧಾನ್ಯಗಳ ಅಕ್ರಮ ಸಾಗಾಟ ತಡೆಗಟ್ಟಲು ಶೀಘ್ರವೇ ಡಿಜಿಟಲ್ ವ್ಯವಸ್ಥೆಯನ್ನು ಜಾರಿಗೆ ತರಲಾಗುವುದೆಂದರು.
ಸರಕಾರ ಕಂಬಳದ ಪರ
ರಾಜ್ಯ ಸರಕಾರ ಕಂಬಳದ ಪರವಾಗಿದೆ. ದೇಶಿ ಕ್ರೀಡೆಗಳನ್ನು ಉಳಿಸಿ ಬೆಳೆಸಬೇಕು. ಪ್ರಾಣಿಹಿಂಸೆ ಕಾಯ್ದೆಯಿಂದ ದೇಶಿ ಕ್ರೀಡೆಗಳನ್ನು ಹೊರಗಿಟ್ಟಾಗ ಮಾತ್ರ ಸಂಸ್ಕೃತಿ ಮತ್ತು ಕಾನೂನಿನ ನಡುವಿನ ಸಂಘರ್ಷ ತಪ್ಪಿಸಲು ಸಾಧ್ಯ ಎಂದರು.
ಕಂಬಳ ಮತ್ತು ಯಕ್ಷಗಾನ ಕರಾವಳಿ ಸಂಸ್ಕೃತಿಯ ಎರಡು ಕಣ್ಣುಗಳಿದ್ದಂತೆ ಇವೆರಡುಗಳ ಉಳಿಸಲು ಸರಕಾರ ಬದ್ಧವಾಗಿದೆ ಎಂದು ಅವರು ಪುನರುಚ್ಚಿಸಿದರು.

Comments are closed.