ರಾಷ್ಟ್ರೀಯ

ಗೋ ಹತ್ಯೆ ನಿಷೇಧ: ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾ ಮಾಡಿದ ಸುಪ್ರೀಂ

Pinterest LinkedIn Tumblr


ಲಖನೌ, ಜ. ೨೭- ದೇಶದ ಎಲ್ಲಾ ರಾಜ್ಯಗಳಲ್ಲೂ ಗೋವಧೆಯನ್ನು ನಿಷೇಧಿಸಿ ಆದೇಶ ನೀಡುವಂತೆ ಮನವಿ ಮಾಡಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಇಂದು ತಿರಸ್ಕರಿಸಿದೆ.

ಅಂತರರಾಜ್ಯ ಅಕ್ರಮ ಗೋ ಸಾಗಾಣಿಕೆಯನ್ನು ನಿಷೇಧಿಸಿ ತಾನು ಈಗಾಗಲೇ ಆಜ್ಞೆ ಮಾಡಿರುವುದಾಗಿಯೂ ನ್ಯಾಯಾಲಯ ಹೇಳಿದೆ.

ಗೋ ಹತ್ಯೆ ನಿಷೇಧವನ್ನು ಪ್ರಶ್ನಿಸಿ ಮಹಾರಾಷ್ಟ್ರದಾದ್ಯಂತ 36 ದನದ ಮಾಂಸ ಮಾರಾಟಗಾರರ ಸಂಘಗಳು ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿದ್ದವು.

ಹಸುಗಳನ್ನು ಬಿಟ್ಟು ಎತ್ತು ಮತ್ತು ಹೋರಿಗಳನ್ನು ಹತ್ಯೆ ಮಾಡಲಾದರೂ ಅನುಮತಿ ನೀಡುವಂತೆ ನ್ಯಾಯಾಲಯಕ್ಕೆ ಅರ್ಜಿಯಲ್ಲಿ ಮನವಿ ಮಾಡಲಾಗಿತ್ತು.

ಅರ್ಜಿಯಲ್ಲಿ 2015ರ ಮಹಾರಾಷ್ಟ್ರ ಪ್ರಾಣಿ ಸಂರಕ್ಷಣಾ (ತಿದ್ದುಪಡಿ) ಕಾಯ್ದೆಯ ಸಾಂವಿಧಾನಿಕ ಮೌಲ್ಯವನ್ನೂ ಪ್ರಶ್ನಿಸಲಾಗಿತ್ತು. ಈ ಕಾಯ್ದೆಯ ಪ್ರಕಾರ ಗೋಹತ್ಯೆ, ಗೋಮಾಂಸ ಇಟ್ಟುಕೊಳ್ಳುವುದು, ತಿನ್ನುವುದು ಮತ್ತು ಗೋಮಾಂಸವನ್ನು ಆಮದು ಮಾಡಿಕೊಳ್ಳುವಂತಿಲ್ಲ.

ಈ ವರ್ಷದ ಮೊದಲಲ್ಲಿ ಮಹಾರಾಷ್ಟ್ರ ಸರ್ಕಾರ 1976ರ ಮಹಾರಾಷ್ಟ್ರ ಪ್ರಾಣಿ ಸಂರಕ್ಷಣಾ (ತಿದ್ದುಪಡಿ) ಕಾಯ್ದೆಗೆ ತಿದ್ದುಪಡಿ ಮಾಡಿ ಎತ್ತು, ಹೋರಿ ಮತ್ತು ಹಸುಗಳ ಹತ್ಯೆ ಮಾಡುವುದನ್ನು ನಿಷೇಧಿಸಲಾಗಿತ್ತು.

ಈ ಕಾನೂನನ್ನು ನಂತರ ಮುಂಬೈ ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದ್ದು, ನ್ಯಾಯಾಲಯ ನಿಷೇಧದ ಆಜ್ಞೆಯನ್ನು ಎತ್ತಿ ಹಿಡಿದಿತ್ತು.

Comments are closed.