ಕರ್ನಾಟಕ

ನೈಸರ್ಗಿಕ ಪಾನೀಯದಿಂದ ಮೂತ್ರಪಿಂಡಗಳ ರಕ್ಷಣೆ

Pinterest LinkedIn Tumblr

ಮಂಗಳೂರು: ನಮ್ಮ ಶರೀರದಲ್ಲಿರುವ ವ್ಯರ್ಥ ಪದಾರ್ಥಗಳನ್ನು ಹೊರಹಾಕುವುದರಲ್ಲಿ ನಮ್ಮ ಕಿಡ್ನಿಗಳು (ಮೂತ್ರ ಪಿಂಡಗಳು) ಪ್ರಮುಖ ಪಾತ್ರ ವಹಿಸುತ್ತವೆ.ಶರೀರವು ಸಕ್ರಮವಾಗಿ ಕಾರ್ಯನಿರ್ವಹಿಸಬೇಕೆಂದರೆ,ಮೂತ್ರಪಿಂಡಗಳು ನಿರಂತರವಾಗಿ ಕೆಲಸಮಾಡುತ್ತಲೇ ಇರಬೇಕು.ಮೂತ್ರ ಪಿಂಡಗಳು ಪ್ರತಿದಿನವೂ ಲವಣಗಳು, ವಿಷಪದಾರ್ಥಗಳನ್ನು ಸೋಸಿ ದೇಹದಿಂದ ಹೊರದೂಡುತ್ತಿರುತ್ತವೆ.ಆದರೆ,ಕೆಳಗೆ ತಿಳಿಸಲಾದ ಒಂದು ಸಹಜ ಸಿದ್ಧವಾದ ಪಾನೀಯದಿಂದ ಕಿಡ್ನಿಗಳು ತ್ವರಿತವಾಗಿ ಶುಭ್ರಗೊಳ್ಳುತ್ತವೆ.ಆ ಪಾನೀಯವನ್ನು ತಯಾರಿಸವುದು ಹೇಗೆಂದು ತಿಳಿಯೋಣ.

1.ತಾಜಾ ಕೊತ್ತಂಬರಿ ಸೊಪ್ಪನ್ನು ತೊಳೆದು ಕತ್ತರಿಸಬೇಕು.
2.ಒಂದು ಪಾತ್ರೆಯಲ್ಲಿ ನೀರು ಹಾಕಿ ,ಅದರಲ್ಲಿ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಸ್ವಲ್ಪಹೊತ್ತು ನೆನೆಸಿಡಬೇಕು.ನಂತರ 10 ನಿಮಿಷಗಳಕಾಲ ಕುದಿಸಬೇಕು.
3.ಪಾತ್ರೆಯನ್ನು ಸ್ಟೌ ನಿಂದ ಕೆಳಗಿಳಿಸಿ, ಮುಚ್ಚಳದಿಂದ ಮುಚ್ಚಿ ಆರಲು ಬಿಡಬೇಕು.
4.ದ್ರವ ತಣ್ಣಗಾದ ಮೇಲೆ ,ಒಂದು ಶುಭ್ರವಾದ ಬಟ್ಟೆಯಿಂದ ಸೋಸಿಕೊಂಡು,ಫ್ರಿಡ್ಜ್ ನಲ್ಲಿಟ್ಟುಕೊಳ್ಳಬೇಕು.
5. ದಿನಕ್ಕೆ ಒಂದು ಲೋಟದಂತೆ ,ತಿಂಗಳಲ್ಲಿ ಎರಡು ಬಾರಿ ಈ ಪಾನೀಯವನ್ನು ಸೇವಿಸಬೇಕು.ಇದನ್ನು ಕುಡಿದನಂತರ,ಶರೀರದಲ್ಲಿರುವ ಕಲ್ಮಶಗಳು ಹೊರಹೋಗುವುದರಿಂದ ಮೂತ್ರದ ಬಣ್ಣ ಬದಲಾಗುತ್ತದೆ. ಈ ಪಾನೀಯದ ಒಟ್ಟಿಗೆ ಪ್ರತಿ ದಿನವೂ ಸಾಧ್ಯವಾದಷ್ಟು ದ್ರವ ಪದಾರ್ಥಗಳನ್ನು ಸೇವಿಸುವುದರಿಂದ ಅಧಿಕ ಲಾಭವಾಗುತ್ತದೆ.
6.ಮಹಿಳೆಯರಿಗೆ ಋತು ಸಮಯದಲ್ಲಿ ಉಂಟಾಗುವ ನೋವುಗಳನ್ನು ಈ ಪಾನಿಯ ನಿವಾರಿಸುತ್ತದೆ.

ವಿಶೇಷ ಸೂಚನೆ:
ಆದರೆ,ಮೂತ್ರ ಪಿಂಡದಲ್ಲಿ ಕಲ್ಲುಗಳಿರುವವರು ಈ ಪಾನೀಯವನ್ನು ಸೇವಿಸಬಾರದು. ಏಕೆಂದರೆ ಈ ಪಾನೀಯವನ್ನು ಸೇವಿಸುವುದರಿಂದ ಇತರೆ ಸಮಸ್ಯೆಗಳು ತಲೆದೋರಬಹುದು. ಗರ್ಭಿಣಿ ಸ್ತ್ರೀಯರು ಈ ಪಾನೀಯವನ್ನು ಸೇವಿಸಬೇಕಾದರೆ ವೈದ್ಯರ ಸಲಹೆ ಪಡೆದುಕೊಳ್ಳಬೇಕು.

Comments are closed.