ಕರಾವಳಿ

ದಡಾರ – ರುಬೆಲ್ಲಾ ಲಸಿಕಾ ಅಭಿಯಾನದ ತರಬೇತಿ

Pinterest LinkedIn Tumblr

ಮ0ಗಳೂರು ಜನವರಿ. 21 : ಪುತ್ತೂರು ಪುರಭವನದಲ್ಲಿ ತಾಲೂಕಿನ ಎಲ್ಲಾ ಶಾಲಾ ಮುಖ್ಯೋಪಾಧ್ಯಾಯ ಹಾಗೂ ನೋಡಲ್ ಶಿಕ್ಷಕರಿಗೆ ಜನವರಿ 20 ರಂದು ದಡಾರ – ರುಬೆಲ್ಲಾ ಲಸಿಕಾ ಅಭಿಯಾನದ ಬಗ್ಗೆ ತರಬೇತಿಯನ್ನು ಆಯೋಜಿಸಲಾಯಿತು.

ಪುರಸಭಾ ಆಯುಕ್ತರಾದ ರೂಪಾ ಮಾತನಾಡಿ, ಆರೋಗ್ಯ ಇಲಾಖೆ ಹಮ್ಮಿಕೊಂಡ ಈ ಅಭಿಯಾನದಲಿ,್ಲ ಶಿಕ್ಷಕರು ಸಕ್ರಿಯವಾಗಿ ಪಾಲ್ಗೊಂಡು ಶಾಲೆಗಳಲ್ಲಿ ಎಲ್ಲಾ ಮಕ್ಕಳು ಲಸಿಕೆ ಪಡೆದುಕೊಂಡು 100% ಸಾಧನೆಯಾಗುವಂತೆ ಸಹಕರಿಸಬೇಕೆಂದು ಕರೆ ನೀಡಿದರು.

ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿ ಡಾ|| ಹೆಚ್ ಅಶೋಕ್ ಅವರು ದಡಾರ – ರುಬೆಲ್ಲಾ ಕಾಯಿಲೆಯ ಲಕ್ಷಣಗಳು, ತೊಡಕುಗಳು, ತಡೆಗಟ್ಟುವಿಕೆಯ ಕುರಿತು ಹಾಗೂ ದಡಾರ – ರುಬೆಲ್ಲಾ ಲಸಿಕಾ ಅಭಿಯಾನ-2017 ಅನುಷ್ಠಾನದಲ್ಲಿ ಶಿಕ್ಷಕರಿಗೆ ಇರುವ ಪಾತ್ರದ ಬಗ್ಗೆ ಮಾಹಿತಿ ನೀಡಿದರು. ಪ್ರತಿ ಶಾಲೆಗಳಲ್ಲಿ ಅಧ್ಯಾಪಕ-ಪೋಷಕರ ಸಭೆ ನಡೆಸಿ 9 ತಿಂಗಳಿಂದ 15 ವರ್ಷದೊಳಗಿನ ಎಲ್ಲಾ ಮಕ್ಕಳು ಲಸಿಕೆ ಹಾಕಿಸಿಕೊಳ್ಳುವಂತೆ ಪೋಷಕರ ಮನವೊಲಿಸಬೇಕೆಂದು ತಿಳಿಸಿದರು.

ಆರೋಗ್ಯ ಇಲಾಖೆಯು ಶಾಲೆಗಳಲ್ಲಿ ಹಮ್ಮಿಕೊಂಡಿರುವ ಲಸಿಕಾ ದಿನಗಳಂದು ಎಲ್ಲಾ ಶಿಕ್ಷಕರು ಸಂಪೂರ್ಣ ಸಹಕಾರ ನೀಡುವಂತೆ ಕೋರಿದರು. ಪುತ್ತೂರು ತಾಲೂಕಿನ ಸುಮಾರು 312 ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ನೋಡಲ್ ಶಿಕ್ಷಕರು ಹಾಜರಿದ್ದರು.

ಕ್ಷೇತ್ರ ಶಿಕ್ಷಣಾಧಿಕಾರಿ, ಪುತ್ತೂರು ಜಿ.ಯಸ್ ಶಶಿಧರ್ ಇವರು ಮಾತನಾಡುತ್ತ, ದಡಾರ – ರುಬೆಲ್ಲಾ ಲಸಿಕಾ ಅಭಿಯಾನದ ಕುರಿತು ಈಗಾಗಲೇ ಎಲ್ಲಾ ಶಾಲೆಗಳಿಗೆ ಸುತ್ತೋಲೆ ಕಳುಹಿಸಲಾಗಿದ್ದು, ಆರೋಗ್ಯ ಇಲಾಖೆಯು ಹಮ್ಮಿಕೊಂಡಿರುವ ಈ ಕಾರ್ಯಕ್ರಮದಲ್ಲಿ ಸಂಪೂರ್ಣವಾಗಿ ಪಾಲ್ಗೊಳ್ಳುವಂತೆ ಶಿಕ್ಷಕರಿಗೆ ಹಾಗೂ ಮುಖ್ಯೋಪಾಧ್ಯಾಯರಿಗೆ ಸೂಚನೆ ನೀಡಿದರು.

Comments are closed.