ಮಂಗಳೂರು: ಸಹಜ ಪ್ರಸವವಾಗಲಿ ಇಲ್ಲವೆ ಸಿಜೇರಿಯನ್ ಆಗಲಿ,ಹುಟ್ಟಿದ ತಕ್ಷಣ ಮಗು ಅತ್ತೇ ಅಳುತ್ತದೆ. ಒಂದು ವೇಳೆ ಹಾಗೆ ಅಳದಿದ್ದರೆ ವೈದ್ಯರು ಮಗುವನ್ನು ಚಿವುಟಿ ಅಥವಾ ಬೆನ್ನಿನ ಮೇಲೆ ತಟ್ಟಿ ಅಳುವಂತೆ ಮಾಡುತ್ತಾರೆ. ಮಕ್ಕಳು ಹುಟ್ಟಿದ ಮೇಲೆ ಅಳಲೇಬೇಕು. ಒಂದು ವೇಳೆ ಹಾಗೆ ಅಳದಿದ್ದರೆ ,ವೈದ್ಯರು ಅಳುವಂತೆ ಮಾಡುತ್ತಾರೆ
ಹೀಗೇಕೆಂದು ನಿಮಗೆ ಗೊತ್ತೇ? ಅದರ ವಿಷಯವಾಗಿಯೇ ಇಂದು ನಿಮಗೆ ತಿಳಿಯಪಡಿಸುತ್ತೇವೆ.
1. ಮಗು ತಾಯಿಯ ಗರ್ಭದಲ್ಲಿರುವಾಗ ಹೊಕ್ಕುಳ ಬಳ್ಳಿಯಿಂದ ಆಮ್ಲಜನಕ ಪಡೆದುಕೊಂಡು, ಕಾರ್ಬನ್ ಡೈ ಆಕ್ಸೈಡ್ ರಕ್ತದೊಳಕ್ಕೆ ಬಿಡುತ್ತದೆ. ಮಗುವಿಗೆ ಶ್ವಾಸಕೋಶಗಳ ಮೂಲಕ ಉಸಿರಾಡಲು ಅವಕಾಶವಿರುವುದಿಲ್ಲ. ತಾಯಿಯ ಗರ್ಭದಿಂದ ಹೊರಬಂದನಂತರ ಶ್ವಾಸಕೋಶಗಳ ಮೂಲಕವೇ ಉಸಿರಾಡಬೇಕಾಗಿರುತ್ತದೆ. ಇದರಿಂದಾಗಿ ಮಕ್ಕಳು ಹೆದರಿ ಆ ರೀತಿ ಅಳುತ್ತಾರಂತೆ.
2. ಮಕ್ಕಳು ಹುಟ್ಟಿದ 30 ರಿಂದ 60 ಸೆಕೆಂಡುಗಳ ಒಳಗೆ ತಪ್ಪದೆ ಅಳುತ್ತಾರಂತೆ. ತಮ್ಮ ಶ್ವಾಸಕೋಶಗಳು, ಮೂಗಿನಲ್ಲಿರುವ ಆಮ್ನಿಯಾಟಿಕ್ ದ್ರವ ಒಳಗೆ ಹೋಗಿ ಉಸಿರಾಡಲಾಗದೆ ಈ ರೀತಿ ಅಳುತ್ತಾರಂತೆ.
3.ತಾಯಿಯ ಗರ್ಭದಲ್ಲಿರುವಾಗ ಉಷ್ಣತೆ 37 ಡಿಗ್ರಿ ಸೆಂಟಿಗ್ರೇಡ್ ಇರುತ್ತದೆ. ಅದೇ ಹೊರಗೆ ಬಂದಾಗ 22 ಡಿಗ್ರಿ ಸೆಂಟಿಗ್ರೇಡ್ ಇರುವುದರಿಂದ ,ವಾತಾವರಣದ ಹಠಾತ್ ಬದಲಾವಣೆಯಿಂದ ಮಕ್ಕಳು ಅಳುತ್ತಾರಂತೆ.
4.ಮಕ್ಕಳು ಹುಟ್ಟುವ ಸಮಯದಲ್ಲಿ ಆ ಮಗುವಿನ ರಕ್ತದಲ್ಲಿ ಕಾರ್ಬನ್ ಡೈ ಆಕ್ಸೈಡ ಅತೀ ಹೆಚ್ಚಾಗಿ ಇರುತ್ತದೆ.ಅಷ್ಟು ಹೆಚ್ಚು ಪ್ರಮಾಣದಲ್ಲಿರುವುದನ್ನು ತಾಳಲಾಗದೆ ಮಗು ಅಳುತ್ತದಂತೆ.
5. ಮಗು ಗರ್ಭದಲ್ಲಿರುವಾಗ, ಸುತ್ತಲೂ ಇರುವ ದ್ರವದಿಂದಾಗಿ ಮಗುವಿನ ಭಾರ ಕಡಿಮೆಯಿರುತ್ತದೆ. ಅದೇ ತಾಯಿಯ ಹೊಟ್ಟೆಯಿಂದ ಹೊರಬಂದ ನಂತರ ಭಾರ ಹೆಚ್ಚಾದಂತೆ ಅನಿಸಿ,ಭಾರವನ್ನು ತಾಳಲಾರದೆ ಮಗು ಅಳುತ್ತದೆ.
6. ತಾಯಿ ಮಗುವಿನ ನಡುವೆ ಇರುವ ಹೊಕ್ಕುಳ ಬಳ್ಳಿ ಸುಮಾರು 30 ರಿಂದ 60 ಸೆ.ಮೀ. ಇರುತ್ತದೆ. ಇದಕ್ಕಿಂತಲೂ ಹೆಚ್ಚು ಉದ್ದವಿದ್ದರೆ ತೊಂದರೆಯಿಲ್ಲವಾದರೂ, ಕಡಿಮೆಯಿದ್ದರೆ ಮಾತ್ರ ಅದು ಮಗುವಿನಿಂದ ಬೇಗ ಬೇರ್ಪಡುತ್ತದಂತೆ. ಇಂತಹ ಸಂದರ್ಭಗಳಲ್ಲಿ ಗರ್ಭಕೋಶದಿಂದ ಮಗು ಹೊರಬರುವಾಗ ತುಂಬಾ ಅಹಿತಕರವಾಗಿರುತ್ತದಂತೆ. ಹೊರ ಬಂದ ತಕ್ಷಣ ಅಳಲು ಪ್ರಾರಂಭಿಸುತ್ತೆ.
ಮಗು ಹುಟ್ಟಿದ ಮೇಲೆ ಯಾಕೆ ಅಳಲೇಬೇಕೆಂದರೆ….. ಒಂದು ವೇಳೆ ಹಾಗೆ ಅಳದಿದ್ದರೆ,ಭವಿಷ್ಯದಲ್ಲಿ ಆ ಮಗುವಿಗೆ ಶ್ವಾಸಕೋಶದ ಸಮಸ್ಯೆಗಳು ಬರುತ್ತವಂತೆ. ಮುಖ್ಯವಾಗಿ : ಸೈನಸ್,ಶೀತ,ಗಂಟಲು,ಮೂಗು,ಕಿವಿ ಸೊಂಕುಗಳು ಬರುತ್ತವಂತೆ. ಹೀಗಾಗಿಯೇ ಹುಟ್ಟಿದ ಕೂಡಲೇ ಮಗು ಅಳದಿದ್ದರೆ, ಮಗುವನ್ನು ತಲೆ ಕೆಳಗಾಗಿ ಹಿಡಿದು ಪೃಷ್ಠಗಳ ಮೇಲೆ ತಟ್ಟುತ್ತಿದ್ದರಂತೆ. ಇಂದಿನ ದಿನಗಳಲ್ಲಿ ಅದಕ್ಕೆ ಬದಲಾಗಿ ಕಾಲುಗಳನ್ನು ಅಥವಾ ಬೆನ್ನನ್ನು ಮರ್ಧಿಸುವುದರಮೂಲಕ ಮಗುವನ್ನು ಅಳಿಸುತ್ತಾರೆ
Comments are closed.