ಮಂಗಳೂರು: ಉಡುಗೊರೆ ಪಡೆದುಕೊಳ್ಳುವುದು ಎಂದರೆ ಯಾರಿಗೆ ತಾನೇ ಇಷ್ಟವಿರುವುದಿಲ್ಲ ಹೇಳಿ, ಸ್ನೇಹಿತರು, ಕುಟುಂಬದ ಸದಸ್ಯರು ಪರಿಚಯಸ್ಥರು, ಯಾರಾದರೂ ಉಡುಗೊರೆ ಕೊಟ್ರೇ ಅವುಗಳನ್ನು ಪಡೆಯುವಂತಹವರು, ಆ ಉಡುಗೊರೆಗಳನ್ನು ಎಷ್ಟೋ ಭದ್ರವಾಗಿ ನೋಡಿಕೊಳ್ಳುತ್ತಾರೆ. ಸಾಧಾರಣವಾಗಿ ನಮ್ಮಲ್ಲಿ ಉಡುಗೊರೆ ಕೊಡುವುದು, ಎಂಬುದು ಕೇವಲ ಶುಭಕಾರ್ಯಗಳಲ್ಲಿ, ಹುಟ್ಟಿದಹಬ್ಬದಂತಹ ಪ್ರತ್ಯೇಕ ಸಂದರ್ಭದಲ್ಲಿ ಮಾತ್ರವೇ ನಡೆಯುತ್ತದೆ. ಆದರೆ ಅದೇ ಈಗ ಒಂದು ಟ್ರೆಂಡ್ ಆಗಿದೆ ಅಲ್ವಾ… ಇತ್ತೀಚೆಗೆ ನ್ಯೂ ಇಯರ್’ಗೆ ಗಿಫ್ಟ್ ಕೊಡುವುದು-ಪಡೆಯುವುದು ಆರಂಭಿಸಿದ್ದಾರೆ.
ಈ ರೀತಿಯಾಗಿ ಗಿಫ್ಟ್ ಬಂದರೂ ಅಥವಾ ಯಾರಿಗಾದರೂ ಕೊಟ್ಟರೂ ಇವುಗಳ ಬಗ್ಗೆ ಮುಂಚಿತವಾಗಿ ಸ್ವಲ್ಪ ತಿಳಿದುಕೊಂಡಿರಿ. ಏಕೆಂದರೆ ಈಗ ನಾವು ಹೇಳಬಯಸುತ್ತಿರುವುದು ಸಹ ಗಿಫ್ಟ್ ಬಗ್ಗೆ. ಇದಲ್ಲೆದೆ ಜ್ಯೋತಿಷ್ಯಶಾಸ್ತ್ರ, ವಾಸ್ತುಪ್ರಕಾರವಾಗಿ ಈ ಗಿಫ್ಟ್ ಗಳನ್ನು ಕೊಟ್ಟರೂ.., ತೆಗೆದುಕೊಂಡರೂ, ಅದರಿಂದ ಅದೃಷ್ಟ ಕೂಡಿ ಬರುತ್ತೆದೆಯಂತೆ. ಹೌದು ನೀವು ಕೇಳುತ್ತಿರುವುದು ಕರೆಕ್ಟ್. ಆದರೆ ನಮಗೆ ಅದೃಷ್ಟವನ್ನು ತಂದು ಕೊಡುವ ಆ ಗಿಫ್ಟ್ ಗಳಾವುವು. ಎಂಬುದನ್ನು ನೋಡೋಣ.
ಆನೆಯ ಗೊಂಬೆಗಳು:
ಇವುಗಳನ್ನು ಗಿಫ್ಟ್ ಆಗಿ ಕೊಟ್ಟಂತಹವರಿಗೆ ಅವುಗಳನ್ನು ತೆಗೆದುಕೊಂಡವರಿಗೆ ಅದೃಷ್ಟ ಚೆನ್ನಾಗಿ ಕೂಡಿ ಬರುತ್ತದೆಯಂತೆ. ಅವರು ಅಂದುಕೊಂಡಿದ್ದೆಲ್ಲಾ ಈಡೇರುತ್ತದೆಯಂತೆ. ಆದರೆ ಬೆಳ್ಳಿ, ಬಂಗಾರದಂತಹ, ಬೆಲೆಬಾಳುವ ಲೋಹಗಳಿಂದ ಮಾಡಿದ ಆನೆಯ ಗೊಂಬೆಯನ್ನು ಕೊಂಡುಕೊಳ್ಳಲು ಸಾಧ್ಯವಾಗದವರು ಕಟ್ಟಿಗೆಯಿಂದ, ಹಿತ್ತಾಳೆ, ತಾಮ್ರದಂತಹ ಲೋಹಗಳಿಂದ ಮಾಡಿದ ಗೊಂಬೆಗಳನ್ನು ಗಿಫ್ಟ್ ರೂಪದಲ್ಲಿ ನೀಡಬಹುದು.
ಮಣ್ಣಿನ ಪಾತ್ರೆಗಳು:
ಮಣ್ಣಿನಿಂದ ಮಾಡಿದ ಬಣ್ಣ ಬಣ್ಣದ ಪಾತ್ರೆಗಳನ್ನು ಗಿಫ್ಟಾಗಿ ಕೊಟ್ಟರೂ, ಪಡೆದುಕೊಂಡರೂ ಅದರಿಂದ ಜೀವನದಲ್ಲಿ ಎಲ್ಲಾ ಶುಭವೇ ಆಗುತ್ತದೆಯಂತೆ. ಧನವೆಂಬುದು ಚೆನ್ನಾಗಿ ಲಭಿಸುತ್ತದೆ. ಮಣ್ಣಿನಿಂದ ತಯಾರಾದ ಭೂಮಿ ಎಂಬ ಅಂಶ ನಮ್ಮ ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ತೊಲಗಿಸುತ್ತದೆಯಂತೆ.
ಪಿಯೋನಿಸ್ ಹೂಗಳು:
ಪಿಯೋನಿಸ್(Peonies) ಎಂದು ಕರೆಯಲ್ಪಡುವ ಹೂಗಳನ್ನು ಗಿಫ್ಟ್ ಕೊಟ್ಟರೂ-ತೆಗೆದುಕೊಂಡರೂ ಅದರಿಂದ ಮನೆಯಲ್ಲಿ ಯಾವಾಗಲೂ ಪ್ರಶಾಂತ ವಾತಾವರಣವಿರುತ್ತದೆ. ಸಂಪತ್ತು ಸ್ಥಿರವಾಗಿ ವೃದ್ದಿ ಯಾಗುತ್ತಲೇ ಇರುತ್ತದೆಯಂತೆ. ಹಣ ಚೆನ್ನಾಗಿ ಸಂಪಾದನೆ ಮಾಡುವರಂತೆ.
ಬೆಳ್ಳಿ ನಾಣ್ಯಗಳು ಅಥವಾ ಪಾತ್ರೆಗಳು:
ಪುರಾಣಗಳ ಪ್ರಕಾರ ಬೆಳ್ಳಿ ಎಂದರೆ ಲಕ್ಷ್ಮೀದೇವಿಗೆ ತುಂಬ ಇಷ್ಟವಂತೆ. ಇದರಿಂದ ಬೆಳ್ಳಿ ನಾಣ್ಯಗಳು, ಪಾತ್ರೆಗಳನ್ನು ಉಡುಗೊರೆಯಾಗಿ ನೀಡಿದರೂ, ತೆಗೆದುಕೊಂಡರೂ ಇದರಿಂದ ಸಂಪತ್ತಿನ ವೃದ್ದಿಯಾಗಿತ್ತದೆಯಂತೆ. ಅತಂಹವರಿಗೆ ಲಕ್ಷ್ಮೀದೇವಿ ಕೃಪಾಕಟಾಕ್ಷೆ ಎಂಬುದು ಯಾವಾಗಲೂ ಇರುತ್ತದೆಯಂತೆ.
ಕುದುರೆಗಳ ಪೈಟಿಂಗ್:
ಏಳು ಬಿಳಿಯ ಕುದುರೆಗಳು ಓಡುತ್ತಿರುವಂತೆ ಇರುವ ಚಿತ್ರಕಲೆಯನ್ನು ಗಿಫ್ಟ್ ಆಗಿ ಕೊಟ್ಟರೂ ಅಥವಾ ಪಡೆದರೂ ಅದರಿಂದ ಆ ವ್ಯಕ್ತಿಗಳು ತಮ್ಮ ಕ್ಷೇತ್ರದಲ್ಲಿ ಅದ್ಭುತವಾಗಿ ಯಶಸ್ಸುಗಳಿಸುತ್ತಾರೆ. ಹಣ ಚೆನ್ನಾಗಿ ಸಂಪಾದನೆ ಮಾಡುತ್ತಾರಂತೆ. ಫೆಂಗ್ ಶುಯ್ ವಾಸ್ತು ಈ ವಿಷಯವನ್ನು ಹೇಳುತ್ತಿದೆ.
ಬಟ್ಟೆಗಳು:
ಕೊನೆಯದಾಗಿ ಬಟ್ಟೆಗಳು. ಇವುಗಳನ್ನು ಉಡುಗೊರೆ ರೂಪದಲ್ಲಿ ಪಡೆದರೂ ಅಥವಾ ಯಾರಿಗಾದರೂ ನೀಡಿದರೂ ಅದರಿಂದ ಯಾವಾಗಲೂ ಒಳ್ಳೆಯದೇ ಆಗುತ್ತದೆಯಂತೆ. ಆದರೆ ಕಪ್ಪು ಬಣ್ಣದ ಬಟ್ಟೆಗಳನ್ನು ಮಾತ್ರ ನೀಡಬಾರದು. ಬೇರೆ ಯಾವುದೇ ಬಣ್ಣದ ಬಟ್ಟೆಗಳನ್ನು ನೀಡಿದರೂ ಪರವಾಗಿಲ್ಲವಂತೆ.
Comments are closed.