ಕರ್ನಾಟಕ

ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಮಹಿಳಾ ಟೆಕ್ಕಿ

Pinterest LinkedIn Tumblr

ಬೆಂಗಳೂರು: ನಗರದ ವೈಟ್‍ಫೀಲ್ಡ್ ನ ಹರ್ಮಾನ್ ಸಾಫ್ಟ್‍ವೇರ್ ಕಂಪನಿಯಲ್ಲಿ ಪ್ರೊಡಕ್ಷನ್ ಅಸಿಸ್ಟೆಂಟ್ ಮ್ಯಾನೆಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಟೆಕ್ಕಿ ಕಟ್ಟಡದಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಳಗಿನ ಜಾವ ನಡೆದಿದೆ.

30 ವರ್ಷದ ಶೋಭಾ ಲಕ್ಷ್ಮಿ ನಾರಾಯಣ ಕಟ್ಟಡದ ಮೇಲಿಂದ ಬಿದ್ದು ಮೃತಪಟ್ಟ ಟೆಕ್ಕಿ.

ಮೂಲತಃ ಮಂಡ್ಯ ಮೂಲದವರಾಗಿರೋ ಶೋಭಾ, ಮನೆಯಲ್ಲಿ ವಾಮಾಚಾರ ಮಾಡಿಸಿದ್ದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ಇದಂದಾಗಿ ಈಕೆ ಇಂದು ಬೆಳಗ್ಗೆ 8 ಗಂಟೆ ಸುಮಾರಿನಲ್ಲಿ ಕಂಪನಿಯ ನಾಲ್ಕನೇ ಮಹಡಿಯಲ್ಲಿರುವ ಕೆಫೇಟೇರಿಯಾದಿಂದ ಜಿಗಿದು ಸಾವನ್ನಪ್ಪಿದ್ದಾಳೆ.

ವಿಷಯ ತಿಳಿದ ವೈಟ್ ಫೀಲ್ಡ್ ಪೊಲೀಸರು ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರಿಕ್ಷೇಗಾಗಿ ಶವವನ್ನು ವೈದೇಹಿ ಆಸ್ಪತ್ರೆಗೆ ರವಾನಿಸಿದ್ದಾರೆ.

Comments are closed.