ಕರ್ನಾಟಕ

ಪಿತ್ತ ಹೆಚ್ಚಾದಾಗ ಕಾಡುವ ವಾಂತಿ, ತಲೆನೋವುಗೆ ರಾಮಬಾಣ ಪುದೀನ ರಸ

Pinterest LinkedIn Tumblr

ಮಂಗಳೂರು: ಪದೇ ಪದೆ ಕಾಡುವ ಶ್ವಾಸಕೋಶದ ಸೋಂಕಿಗೆ 1 ಚಮಚ ಪುದೀನ ರಸಕ್ಕೆ 1 ಚಮಚ ಕ್ಯಾರೆಟ್ ರಸ ಹಾಗೂ 1 ಚಮಚ ಜೇನುತುಪ್ಪ ಸೇರಿಸಿ ಖಾಲಿ ಹೊಟ್ಟೆಗೆ ಸೇವಿಸಿದರೆ ಶ್ವಾಸಕೋಶವು ಸೋಂಕು ರಹಿತವಾಗಿ ಬಲವಾಗುತ್ತದೆ.
2. 1ಚಮಚ ಪುದೀನ ರಸಕ್ಕೆ 1/2 ಚಮಚ ನಿಂಬೆ ರಸ ಮತ್ತು 1 ಚಮಚ ಜೇನುತುಪ್ಪ ಬೆರೆಸಿ ಸೇವಿಸಿದರೆ ಪಿತ್ತ ಹೆಚ್ಚಾದಾಗ ಕಾಡುವ ವಾಂತಿ, ತಲೆನೋವು ಕಡಿಮೆಯಾಗುತ್ತದೆ.
3. ಪುದೀನ ಎಲೆಗಳನ್ನು ಒಣಗಿಸಿ ಪುಡಿ ಮಾಡಿ ಆ ಪುಡಿಯಿಂದ ಹಲ್ಲುಗಳನ್ನು ಉಜ್ಜಿದರೆ ಬಾಯಿ ವಾಸನೆ ಬರುವುದಿಲ್ಲ ಮತ್ತು ವಸಡುಗಳು ದೃಢವಾಗುತ್ತದೆ.
4. ಪುದೀನ ಕಷಾಯವನ್ನು ಸೇವಿಸಿದರೆ ಮುಟ್ಟಿನ ಸಮಯದಲ್ಲಿ ಕಾಡುವ ಹೊಟ್ಟೆ ನೋವು ಕಡಿಮೆಯಾಗುತ್ತದೆ
5. ಕಣ್ಣಿನ ಸುತ್ತ ಕಪ್ಪ್ಪು ಕಟ್ಟಿದ್ದರೆ ಪುದೀನ ಎಲೆಗಳನ್ನು ಪೇಸ್ಟ್ ಮಾಡಿ ನಿಯಮಿತವಾಗಿ ಕಣ್ಣಿನ ಸುತ್ತಲೂ ಲೇಪಿಸಿ.ಇದರಿಂದ ಕಣ್ಣಿನ ಸುತ್ತ ಆಗುವ ಕಪ್ಪು ಕಲೆಗಳು ಕಡಿಮೆಯಾಗುತ್ತದೆ.

Comments are closed.