ಕರ್ನಾಟಕ

ದೇಹಕ್ಕೆ ಬೇಕಾದ ಎಲ್ಲಾ ಪೋಷಕಾಂಶಗಳು ನೀಡುವ ಒಂದೇ ಒಂದು ಹಣ್ಣು ಯಾವುದು ಗೊತ್ತೆ?

Pinterest LinkedIn Tumblr

ಮಂಗಳೂರು: ಸೋಡಿಯಂ, ಪೋಟಾಷಿಯಂ, ಕಾಲ್ಷಿಯಂ, ಮೆಗ್ನಿಷಿಯಂ, ಐರನ್, ನಾರಿನ ಪದಾರ್ಥಗಳು, ಜಿಂಕ್, ಕಾಪರ್, ಪೊಲೆಟ್, ವಿಟಮಿನ್ ಎ,ಸಿ,ಡಿ,ಕೆ೧,ಬಿ೧೨,ಬಿ೬ ಯಾಂಟಿ ಅಕ್ಸಿಡೆಂಟ್ ಗಳು, ಒಮೆಗಾ,3,6 ಫ್ಯಾಟಿ ಯಾಸಿಡ್ ಗಳು…. ಏನಿವೆಲ್ಲಾ ಅಂದುಕೊಳ್ಳುತ್ತಿದ್ದಿರಾ? ಅವೆ ಕಣ್ರೀ, ದಿನ ನಿತ್ಯವೂ ನಾವು ತಿನ್ನುವ ವಿವಿಧ ತರಹದ ಆಹಾರ ಪಧಾರ್ಥಗಳಲ್ಲಿರುವ ಪೋಷಕಾಂಶಗಳು.

ಇವುಗಳ ಬಗ್ಗೆ ನಿಮಗೆ ತಿಳಿದೇ ಇರುತ್ತದೆ. ಯಾವ ಯಾವ ಆಹಾರ ಪದಾರ್ಥಗಳನ್ನು ತೆಗೆದುಕೊಂಡರೆ ಎಂತಹ ಲಾಭಗಳು ದೊರೆಯುತ್ತವೆ ಎಂಬುದು ಎಲ್ಲರಿಗೂ ಗೊತ್ತಿರುತ್ತದೆ. ಆದರೆ ಮೇಲೆ ಹೇಳಿರುವ ಪೋಷಕಾಂಶಗಳೆಲ್ಲವೂ, ನಾವು ತಿನ್ನುವ ಯಾವುದೊ ಒಂದು ಆಹಾರ ಪದಾರ್ಥದಿಂದ ಲಭಿಸುತ್ತದೆ. ಆದರೆ ಅವುಗಳೆಲ್ಲಾ ಒಂದೇ ಪಧಾರ್ಥದಲ್ಲಿ ಲಭಿಸಿದರೆ…? ಅದಕ್ಕಿಂತ ಮಿಗಿಲಾದ, ಅದ್ಭುತವಾದ, ಪೋಷಕವಾದ ಆಹಾರ ಇನ್ನೇನಿರುತ್ತದೆ. ಅಂತಹ ಆಹಾರ ಪಧಾರ್ಥವೇ ಕೀವಿ.

ಕೀವಿ ಹಣ್ಣು ನ್ಯೂಜಿಲ್ಯಾಂಡ್ ನಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಈ ಕೀವಿಹಣ್ಣು ನಮ್ಮ ಹತ್ತಿರ ಈಗ ಹೆಚ್ಚಾಗಿ ಸಿಗುತ್ತಿದೆ. ಡೆಂಗ್ಯೂ ಬಂದಿರುವ ರೋಗಿಗಳು ಇವುಗಳನ್ನು ಈಗ ಹೆಚ್ಚಾಗಿ ತಿನ್ನುತ್ತಿದ್ದಾರೆ. ಅದಕ್ಕೆ ಕಾರಣವೇನೆಂದರೆ, ಈ ಹಣ್ಣಿನಲ್ಲಿರುವ ಯಾಂಟಿ ಆಕ್ಸಿಡೆಂಟ್’ಗಳು. ಆದರೆ ಕೇವಲ ಡೆಂಗಿ ಜ್ವರಕ್ಕೆ ಮಾತ್ರವೇ ಅಲ್ಲ ಕೀವಿ ಹಣ್ಣುಗಳು ತಿನ್ನುವುದರಿಂದ ನಮಗೆ ಯಾವ ಯಾವ ತರಹದ ಲಾಭಗಳಿವೆ. ಅವುಗಳ ಬಗ್ಗೆ ವಿವರವಾಗಿ ತಿಳಿದುಕೊಳ್ಳೋಣ ಬನ್ನಿ…

ಕಣ್ಣಿಗೆ ಸಂಬಂಧಿಸಿದ ರೋಗಿಗಳಿಗೆ:
ದಿನಕ್ಕೆ ಎರಡು, ಮೂರು ಕೀವಿ ಹಣ್ಣುಗಳನ್ನು ತಿಂದರೆ ಕಣ್ಣಿಗೆ ಸಂಭಂಧಿಸಿದ ರೋಗಗಳು ಬರದಹಾಗೆ ನೋಡಿಕೊಳ್ಳಬಹುದು. ವಯಸ್ಸು ಹೆಚ್ಚಾಗುವುದರಿಂದ ಬರುವ ಕಣಗಳ ಕ್ಷೀಣತೆಯನ್ನು ಈ ಹಣ್ಣುಗಳು ತಡೆಗಟ್ಟುತ್ತವೆ.

ಕ್ಯಾನ್ಸರ್ ಬರುವುದಿಲ್ಲ:
ಶರೀರದಲ್ಲಿ ಆಗುವ ನೈಟ್ರೇಟ್ ಫ್ರೀ ರಾಡಿಕಲ್ಸ್ ಪರಿಣಾಮವನ್ನು ಇವು ಕಡಿಮೆ ಗೊಳಿಸುತ್ತವೆ. ಕ್ಯಾನ್ಸರ್ ಉಂಟುಮಾಡುವ ಜನ್ಯೂನ್ ಬದಲಾವಣೆಗಳನ್ನು ನಿರೋಧಿಸುವ ಪದಾರ್ಥ ಕೀವಿಹಣ್ಣುಗಳಲ್ಲಿ ಇರುತ್ತದೆಯೆಂದು ತಜ್ಞರು ಮಾಡಿರುವ ಪರಿಶೊಧನೆಗಳಲ್ಲಿ ತಿಳಿದುಬಂದಿದೆ. ಚರ್ಮ, ಪಿತ್ತಕೋಶ, ಪ್ರೋಸ್ಟಟ್ ಕ್ಯಾನ್ಸರ್ ಗಳು ಬರದ ಹಾಗೆ ತೆಡೆಕಟ್ಟುತ್ತವೆ.

ಜೀರ್ಣ ಕ್ರಿಯೆ ಸಮಸ್ಯೆಗಳಿಗೆ:
ರಕ್ತ ನಾಳಗಳಲ್ಲಿ ಗಡ್ಡೆಕಟ್ಟದಂತೆ ನೋಡಿಕೊಳ್ಳುತ್ತವೆ. ಕಿವಿ ಹಣ್ಣಿನಲ್ಲಿ ಫೈಬರ್ ಹೆಚ್ಚಾಗಿರುವುದರಿಂದ ಜೀರ್ಣಕ್ರಿಯೆಯನ್ನು ವೇಗವಾಗಿ ಕೆಲಸ ಮಾಡುವ ಹಾಗೆ ಮಾಡುತ್ತದೆ. ಯಾಂಟಿ ಆಕ್ಸಿಡೆಂಟ್ ಗುಣಗಳು ಇವುಗಳಲ್ಲಿ ಹೆಚ್ಚಾಗಿ ಇರುತ್ತವೆ. ಮಾನಸಿಕ ರೊಗಗಳನ್ನು ಕಡಿಮೆ ಮಾಡಿವುದಕ್ಕೆ ಉಪಯೋಗಕರವಾದವು.

ಇನ್ಫೆಕ್ಷನ್’ಗಳು, ರೋಗಗಳನ್ನು ದೂರಮಾಡುತ್ತದೆ:
ರಕ್ತ ಸರಬರಾಜು ಹೆಚ್ಚಾಗುತ್ತದೆ. ಉಸಿರಾಟ, ಆಸ್ತಮಾಗಳಂತಹ ಸಮಸ್ಯೆಗಳನ್ನು ತೊಲಗಿಸುತ್ತದೆ. ಮಕ್ಕಳಿಗೆ ಕನಿಷ್ಟ ಅಂದರೂ ವಾರಕ್ಕೆ ಒಂದುಸಾರಿ ಕೀವಿ ಹಣ್ಣುಗಳನ್ನು ತಿನ್ನಿಸಿದರೆ ಕೆಮ್ಮು, ನೆಗಡೆಗಳಂತಹ ಅನಾರೋಗ್ಯಗಳಿಂದ ದೂರವಿರುವಂತೆ ಮಾಡಬಹುದು.

ಹೃದಯ ರೋಗಿಗಳಿಗೆ:
ಹೃದಯಕ್ಕೆ ಉಪಯೋಗಕಾರಿ ಈ ಹಣ್ಣು. ರಕ್ತದೊತ್ತಡ ನಿಯಂತ್ರಿಸುವುದಕ್ಕೆ ಸಹಾಯಕಾರಿಯಾದುದು. ಗರ್ಭಿಣಿ ಸ್ತ್ರೀರಿಗೆ ಕೀವಿ ಹಣ್ಣುಗಳನ್ನು ತಿನ್ನಿಸಿದರೆ ಒಳ್ಳೆಯ ಪೌಷ್ಟಿಕ ಆಹಾರ ಲಭಿಸುತ್ತದೆ. ಅಲ್ಲದೆ ಮಗುವಿನ ಬೆಳವಣಿಗೆಗೂ ಸಹಾ ಸಹಾಯವನ್ನುಂಟುಮಾಡುತ್ತದೆ.

ಶುಗರ್, ಅಧಿಕ ತೂಕದ ಸಮಸ್ಯೆಗಳಿಗೆ:
ರಕ್ತದಲ್ಲಿನ ಶುಗರ್ ಮಟ್ಟವನ್ನು ಕಡಿಮೆ ಮಾಡುವ ಗುಣ ಕೀವಿ ಹಣ್ಣಿಗೆ ಇದೆ. ಷುಗರ್ ಇರುವ ರೋಗಿಗಳಿಗೆ ಈ ಹಣ್ಣು ಹೆಚ್ಚು ಉಪಯುಕ್ತವಾಗಿದೆ. ಇವುಗಳನ್ನು ತಿಂದರೆ ಹೊಟ್ಟೆತುಂಬಿದ ಭಾವನೆ ಉಂಟುಮಾಡಿ ಬಹಳ ಸಮಯ ಇದ್ದರೂ ಹಸಿವು ಆಗುವುದಿಲ್ಲ. ಇದರಿಂದ ತೂಕ ಕಡಿಮೆ ಮಡುವುದಕ್ಕೆ ಸಹಾಯವಾಗುತ್ತದೆ.

ಪುರುಷರ ಅರೋಗ್ಯಕ್ಕೋಸ್ಕರ:
ಕಿವಿ ಹಣ್ಣುನಲ್ಲಿ ಇರುವ ಜಿಂಕ್ ಪುರುಷರಲ್ಲಿ ಟೆಸ್ಟೊಸ್ಪಿರಾನ್ ಹಾರ್ಮೊನನ್ನೂ ಉತ್ಪತ್ತಿಮಾಡುತ್ತದೆ. ಚರ್ಮ, ಕೂದಲು, ಹಲ್ಲು, ಉಗುರು ಮತ್ತಿತರ ಬೆಳವಣಿಗೆಗೆ ಜಿಂಕ್ ಸಹಾಯ ಮಾಡುತ್ತದೆ.

ಕೃಪೆ : ap2tg

Comments are closed.