ಕರ್ನಾಟಕ

ಪುಡಿಪುಡಿಯಾದ 2 ಸಾವಿರದ ನೋಟುಗಳು

Pinterest LinkedIn Tumblr


ಮೈಸೂರು: ಮನೆಯ ಬೀರುವಿನಲ್ಲಿ ಇರಿಸಿದ್ದ 2 ಸಾವಿರ ಮುಖಬೆಲೆಯ ನೋಟುಗಳು ಪುಡಿ ಪುಡಿಯಾಗಿ ಉದುರಿದ ಘಟನೆ ಮೈಸೂರಿನ ಪಡುವಾರಹಳ್ಳಿಯಲ್ಲಿ (ವಿನಾಯಕನಗರ) ಶುಕ್ರವಾರ ನಡೆದಿದೆ. ವಿನಾಯಕನಗರದ ವಿನೋದ್‌ಕುಮಾರ್ ಎಂಬವರು ಡಿ.30ರಂದು ವಿ.ವಿ. ಮೊಹಲ್ಲಾದ ಕರ್ಣಾಟಕ ಬ್ಯಾಂಕ್‌ನಿಂದ 10,000 ಡ್ರಾ ಮಾಡಿದ್ದರು. ಇದರಲ್ಲಿ 2 ಸಾವಿರ ಮುಖಬೆಲೆಯ 4 ನೋಟುಗಳು ಹಾಗೂ 100 ಮುಖಬೆಲೆಯ 20 ನೋಟುಗಳು ಇದ್ದವು.
ಡ್ರಾ ಮಾಡಿದ್ದ ಹಣವನ್ನು ಮನೆಯ ಬೀರುವಿನಲ್ಲಿ ಇರಿಸಿದ್ದರು. ಶುಕ್ರವಾರ ತಮ್ಮ ಹುಟ್ಟಹಬ್ಬ ಅಂಗವಾಗಿ ಮೊಬೈಲ್ ತೆಗೆದುಕೊಳ್ಳಲು ಹಣ ತೆಗೆದಾಗ 2 ಸಾವಿರ ಮುಖಬೆಲೆಯ ನೋಟುಗಳು ಪುಡಿ ಪುಡಿಯಾಗಿದ್ದವು. ಇದರಿಂದ ಕಂಗಾಲಾದ ಅವರು ಪುಡಿಯಾದ ನೋಟುಗಳೊಂದಿಗೆ ಬ್ಯಾಂಕ್‌ಗೆ ಧಾವಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.

Comments are closed.