ಕರ್ನಾಟಕ

ಸಂಕ್ರಾಂತಿಯಲ್ಲೂ ರಾಜ್ಯದ ಬರಗಾಲ ತೋರಿಸಿದ ವಾಟಾಳ್ ನಾಗರಾಜ್

Pinterest LinkedIn Tumblr


ಬೆಂಗಳೂರು, ಜ. ೧೪- ರಾಜ್ಯ ಭೀಕರ ಬರಗಾಲ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಕನ್ನಡ ಚಳವಳಿ ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ಅವರು ಒಣಗಿದ ಹುಲ್ಲು ಮತ್ತು ಜೋಡಿ ಎತ್ತಿನಗಾಡಿಯಲ್ಲಿ ಎಳ್ಳು-ಬೆಲ್ಲ, ಕಡಲೇಕಾಯಿ, ಕಬ್ಬಿನ ಜಲ್ಲೆ ಇಟ್ಟುಕೊಂಡು ಸಂಕ್ರಾಂತಿ ಹಬ್ಬವನ್ನು ವಿನೂತನವಾಗಿ ಆಚರಿಸಿದರು.
ಮೈಸೂರು ಬ್ಯಾಂಕ್ ವೃತ್ತದಿಂದ ಕೆಂಪೇಗೌಡ ಬಸ್ ನಿಲ್ದಾಣದವರೆಗೆ ಜೋಡಿ ಎತ್ತಿನ ಗಾಡಿಯಲ್ಲಿ ಮೆರವಣಿಗೆ ನಡೆಸಿ ಸಾರ್ವಜನಿಕರಿಗೆ ಎಳ್ಳು-ಬೆಲ್ಲ ಹಂಚಿದರು.
ಈ ಸಂದರ್ಭದಲ್ಲಿ ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಭೀಕರ ಬರಗಾಲವನ್ನು ಎದುರಿಸುತ್ತಿದೆ. ಒಂದೆಡೆ ಸಂಕ್ರಾಂತಿ ಹಬ್ಬ ಸಂತೋಷವನ್ನುಂಟು ಮಾಡಿದರೆ, ಮತ್ತೊಂದೆಡೆ ಬರಗಾಲದ ಛಾಯೆ ರೈತರಲ್ಲಿ ನೋವನ್ನುಂಟು ಮಾಡಿದೆ ಎಂದು ವಿಷಾಧ ವ್ಯಕ್ತಪಡಿಸಿದರು.
ಬರಗಾಲವನ್ನು ಕೇಂದ್ರ ಸರ್ಕಾರ ಹಗುರವಾಗಿ ಪರಿಗಣಿಸಿದೆ. ರಾಜ್ಯಕ್ಕೆ ಬರಬೇಕಾದ ಪರಿಹಾರ ನೀಡಲು ಮೀನಾ-ಮೇಷ ಎಣಿಸುತ್ತಿದೆ ಎಂದು ಆರೋಪಿಸಿದರು.
ಹೊಸ ವರ್ಷ ರಾಜ್ಯದ ರೈತರ ಮತ್ತು ಜನತೆಯಲ್ಲಿ ಶುಭ ತರಲಿ ಎಂದು ಅವರು ಹಾರೈಸಿದರು.

Comments are closed.