ಕರ್ನಾಟಕ

ಹೆಣ್ಣಿನ ಮಾತು ಕೇಳಿದರೆ ನೀವು ಸರ್ವನಾಶ ಅಗುತ್ತೀರಿ: ಯಡಿಯೂರಪ್ಪಗೆ ಕಾಗಿನೆಲೆ ಮಠದ ಸ್ವಾಮಿಜಿ

Pinterest LinkedIn Tumblr


ರಾಯಚೂರು (ಜ.14): ಹೆಣ್ಣಿನ ಮಾತು ಕೇಳಿ ಸರ್ವನಾಶವಾಗುತ್ತಿದ್ದೀರಿ ಎಂದು ಹಾವೇರಿಯ ಕಾಗಿನೆಲೆ ಮಠದ ನಿರಂಜನಾನಂದಪುರಿ ಸ್ವಾಮೀಜಿ, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರಿಗೆ ಎಚ್ಚರಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದಾರೆ.
ಸ್ತ್ರೀ ಬುದ್ಧಿ ಪ್ರಳಯಾಂತಕ, ಯಡಿಯೂರಪ್ಪ ನೀವು ಹೆಣ್ಣಿನ ಮಾತು ಕೇಳಿ ಸರ್ವನಾಶ ಆಗುತ್ತಿದ್ದೀರಿ. ಅದಕ್ಕೆ ಸ್ವಲ್ಪ ಗುರುವಿನ ಮಾತು ಕೇಳಿ ಎಂದು ನಿರಂಜನಾನಂದಪುರಿ ಸ್ವಾಮೀಜಿ ಮಾಜಿ ಸಿಎಂ ಯಡಿಯೂರಪ್ಪರಿಗೆ ಎಚ್ಚರಿಕೆ ನೀಡಿದ್ದಾರೆ.
ಹಾಲುಮತ ಸಂಸ್ಕೃತಿ ವೈಭವ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿ, ಈಶ್ವರಪ್ಪ ಅವರ ಎದುರೇ ಬಿಎಸ್​ವೈಗೆ ಎಚ್ಚರಿಕೆ ನೀಡಿದ್ದಾರೆ.
ಹಾಲುಮತ ಸಮಾಜ ನಿಮ್ಮ ನಡವಳಿಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಎಚ್ಚೆತ್ತುಕೊಳ್ಳಿ ಎಂದು ಬಹಿರಂಗ ಸಮಾವೇಶದಲ್ಲಿ ಯಡಿಯೂರಪ್ಪರಿಗೆ ಎಚ್ಚರಿಕೆ ನೀಡಿದ್ದಾರೆ.
ಆ ಸಂದರ್ಭದಲ್ಲಿ, ವೇದಿಕೆ ಮೇಲೆಯೇ ಹಾಗೆ ಮಾತನಾಡಬೇಡಿ ಎಂದು ಸ್ವಾಮಿಜಿಗೆ ಈಶ್ವರಪ್ಪ ಕೈ ಮುಗಿದು ಕೇಳಿಕೊಂಡಿರುವ ಘಟನೆ ನಡೆಯಿತು.

Comments are closed.