ಕರ್ನಾಟಕ

ಹೊಸವರ್ಷದ ರಾತ್ರಿಯ ಇನ್ನೊಂದು ಲೈಂಗಿಕ ದೌರ್ಜನ್ಯ ಪ್ರಕರಣ

Pinterest LinkedIn Tumblr


ಬೆಂಗಳೂರು (ಜ. 14): ಬೆಂಗಳೂರಿನ ಪಿಜಿಯೊಂದರಲ್ಲಿ ಲೈಂಗಿಕ ದೌರ್ಜನ್ಯ ನಡೆದಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 15 ದಿನಗಳ ಹಿಂದೆ ನಡೆದಿರುವ ಘಟನೆಯು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ದೆಹಲಿ ಮೂಲದ 21 ವರ್ಷದ ಯುವತಿಯ ಮೇಲೆ ಡಿ.31ರ ರಾತ್ರಿ ಆಕೆಯು ವಾಸವಿದ್ದ ಕೋರಮಂಗಲದ ಪಿಜಿಯಲ್ಲೇ ಲೈಂಗಿಕ ದೌರ್ಜನ್ಯ ನಡೆದಿದೆ. ಲಿಫ್ಟ್​’ಗಾಗಿ ಕಾಯುತ್ತಿದ್ದ ವೇಳೆ ಕಾಮುಕನೊಬ್ಬ ಯುವತಿಯನ್ನು ಹಿಡಿದು ಎಳೆದಾಡಿದ್ದಾನೆ. ಭಯಗೊಂಡ ಯುವತಿ ಚೀರಿಕೊಂಡಾಗ ಆ ವ್ಯಕ್ತಿ ಮೊಬೈಲ್​ ಕಸಿದು ಪರಾರಿಯಾಗಿದ್ದಾನೆ.
ಕೋರಮಂಗಲದ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಯುವತಿ 4 ತಿಂಗಳ ಹಿಂದೆಯಷ್ಟೇ ಬೆಂಗಳೂರಿಗೆ ಬಂದಿದ್ದಳು. ಯುವತಿಯು ವಿವೇಕನಗರ ಪೊಲೀಸ್​ ಠಾಣೆಯಲ್ಲಿ ದೂರು ಸಲ್ಲಿಸಿದ್ದು, ಐಪಿಸಿ ಸೆಕ್ಷನ್​ 354, 363, 392, 511 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

Comments are closed.