ಕರ್ನಾಟಕ

ಫೇಸ್‍ಬುಕ್ ಮೂಲಕ ಯುವಕನಿಂದ ಮಹಿಳೆಗೆ 6 ಲಕ್ಷ ವಂಚನೆ

Pinterest LinkedIn Tumblr


ಬೆಂಗಳೂರು, ಜ. 13- ಫೇಸ್‍ಬುಕ್‍ನಲ್ಲಿ ಅಪರಿಚಿತರನ್ನು ಗೆಳೆಯರನ್ನಾಗಿ ಮಾಡಿಕೊಂಡ ಲಕ್ಕಸಂದ್ರದ ಮಹಿಳೆಯೊಬ್ಬರು ಬರೋಬ್ಬರಿ 5.90 ಲಕ್ಷ ರೂ. ಕಳೆದುಕೊಂಡು ಪರಿತಪಿಸತೊಡಗಿದ್ದಾರೆ.
ಹಣ ಕಳೆದುಕೊಂಡ ಮಹಿಳೆಯು ನೀಡಿರುವ ದೂರು ದಾಖಲಿಸಿಕೊಂಡಿರುವ ಆಡುಗೋಡಿ ಪೊಲೀಸರು ಫೇಸ್‍ಬುಕ್ ದಾಖಲೆಗಳು, ಬ್ಯಾಂಕ್ ಡಿಟೇಲ್ ಇನ್ನಿತರ ಮಾಹಿತಿ ಆಧರಿಸಿ ದುಷ್ಕರ್ಮಿಗಾಗಿ ಶೋಧ ನಡೆಸಿದ್ದಾರೆ.
ಲಕ್ಕಸಂದ್ರದ ಮಹಿಳೆಗೆ 2016ರ ಡಿಸೆಂಬರ್‍ನಲ್ಲಿ ಫೇಸ್‍ಬುಕ್‍ನಲ್ಲಿ ಸ್ನೇಹಿತನಾದ ದುಷ್ಕರ್ಮಿ ತಾನು ವಿದೇಶದಲ್ಲಿ ಇರುವುದಾಗಿ ಹೇಳಿಕೊಂಡು ಕ್ರಿಸ್ಮಸ್ ಹಾಗೂ ಹೊಸ ವರ್ಷದ ಉಡುಗೊರೆ ಕಳಿಸುತ್ತಿದ್ದೇನೆ ಎಂದು ತಿಳಿಸಿದ್ದನು ನಂತರ ನಿಮಗೆ ಕಳುಹಿಸಿರುವ ಪಾರ್ಸೆಲ್ ದೆಹಲಿಯ ಇಮಿಗ್ರೇಷನ್ ಸೆಂಟರ್‍ನಲ್ಲಿದೆ. ಉಡುಗೊರೆ ಬಿಡಿಸಿಕೊಳ್ಳಲು ಸ್ವಲ್ಪ ಹಣ ಕಟ್ಟಬೇಕು ಎಂದು ಹೇಳಿ ಅಕೌಂಟ್ ನಂಬರ್ ಕೊಟ್ಟು 30 ಸಾವಿರ ರೂಗಳನ್ನು ಖಾತೆಗೆ ಜಮೆ ಮಾಡಿಸಿಕೊಂಡಿದ್ದನು
ನಂತರ ಪಾರ್ಸೆಲ್‍ನಲ್ಲಿ ಡಾಲರ್ ಕಳಿಸುವುದಾಗಿಯೂ ಅದರಿಂದ ನಿಮಗೆ 25 ಲಕ್ಷದಷ್ಟು ಹಣ ಸಿಗುತ್ತದೆ ಎಂದೂ ಆಸೆ ಹುಟ್ಟಿಸಿ 5.90 ಲಕ್ಷ ರೂ.ವನ್ನು ಖಾತೆಗೆ ಹಾಕಿಸಿಕೊಂಡಿದ್ದ. ಹಣ ಬರದಿದ್ದರಿಂದ ಅನುಮಾನಗೊಂಡ ಆಕೆ ಮೊದಲು ಪಾರ್ಸೆಲ್ ಕಳುಹಿಸಿ ಎಂದು ಕೇಳಿ ಒತ್ತಡ ಹಾಕಿದಾಗ ದುಷ್ಕರ್ಮಿ ಫೇಸ್‍ಬುಕ್‍ನ ಅಕೌಂಟ್ ಅನ್ನೇ ಸ್ಥಗಿತಗೊಳಿಸಿ ಐಪಿ ವಿಳಾಸವನ್ನೂ ಬದಲಿಸಿಬಿಟ್ಟು ವಂಚಿಸಿದ್ದಾನೆ.
ನಂತರ ಮಹಿಳೆಯು ಆಡುಗೋಡಿ ಪೊಲೀಸರಿಗೆ ದೂರು ನೀಡಿದ್ದಾರೆ, ಫೇಸ್‍ಬುಕ್ ಸಾಮಾಜಿಕ ಜಾಲ ತಾಣವಾದರೂ ಅದು ತಮ್ಮ ನಿಯಂತ್ರಣದಲ್ಲಿದ್ದರೆ ವಂಚನೆಗೆ ಒಳಗಾಗುವ ಸಾಧ್ಯತೆ ಕಡಿಮೆ ಇದೆ.ಸ್ನೇಹಿತರಲ್ಲದವರು ಪೊರಫೈಲ್ ನೋಡಲು ಸಾಧ್ಯವಾಗದಂತೆ ತಡೆಯಬಹುದು. ಸಿಕ್ಕಸಿಕ್ಕ ಸೆಲ್ಪಿ ಫೋಟೋಗಳನ್ನು ಆಲ್ಬಂ ಮಾಡಿ ಹಾಕಿ ತೊಂದರೆಗೆ ಒಳಗಾಗಬೇಡಿ. ಅಪರಿಚಿತರಿಂದ ಬಂದ ರಿಕ್ವೆಸ್ಟ್ ಒಪ್ಪಿಕೊಳ್ಳುವ ಮೊದಲು ಅವರ ಪೊರಫೈಲ್ ಒಮ್ಮೆ ಪರೀಕ್ಷಿಸಿ ಎಂದು ಪೊಲೀಸರ ಸಲಹೆ ನೀಡಿದ್ದಾರೆ.

Comments are closed.