ರಾಷ್ಟ್ರೀಯ

ಜಿಯೋದಿಂದ ಕೇವಲ 999 ರೂ.ಗೆ ಫೋನ್?

Pinterest LinkedIn Tumblr


ನವದೆಹಲಿ(ಜ. 13): ರಿಲಾಯನ್ಸ್ ಜಿಯೋ 4G VoLTE ಸಪೋರ್ಟ್ ಇರುವ ಫೀಚರ್ ಫೋನ್’ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲು ಅಣಿಯಾಗಿದೆ ಎಂಬ ಸುದ್ದಿ ಕೇಳಿಬಂದಿದೆ. 999 ರೂ.ನಿಂದ 1,500 ರೂಪಾಯಿ ದರವಿರುವ ಈ ಫೋನ್’ಗಳಿಗೆ ಉಚಿತ ಧ್ವನಿ ಕರೆಗಳು ಮತ್ತಿತರ ಸೇವೆಗಳನ್ನು ನೀಡುವ ಸಾಧ್ಯತೆ ಇದೆ. ಇಂಥ ಎರಡು ಅಥವಾ ಹೆಚ್ಚು ಮಾದರಿಯ ಫೀಚರ್ ಫೋನ್’ಗಳನ್ನು ಹೊರತರುವುದು ಜಿಯೋದ ಯೋಜನೆಯಾಗಿದೆ.
ಜಿಯೋ ಚ್ಯಾಟ್, ಲೈವ್ ಟಿವಿ, ವಿಡಿಯೋ ಆನ್’ಡಿಮ್ಯಾಂಡ್, ಜಿಯೋ ಮೊನೀ ಮೊದಲಾದ ಸೇವೆಗಳು ಈ ಫೀಚರ್ ಫೋನ್’ನಲ್ಲಿರಲಿವೆ. ಫ್ರಂಟ್ ಮತ್ತು ಬ್ಯಾಕ್ ಕ್ಯಾಮೆರಾಗಳೂ ಇರಲಿವೆ.
ಸದ್ಯ, ಜಿಯೋದ ಸ್ಮಾರ್ಟ್’ಫೋನ್’ಗಳು ಮಾರುಕಟ್ಟೆಯಲ್ಲಿ 3,500-4,00- ರೂಪಾಯಿಗೆ ಲಭ್ಯವಿದೆ. ಇವುಗಳಲ್ಲಿರುವ ಬಹುತೇಕ ಸೇವೆಗಳನ್ನು ಕಡಿಮೆ ಬೆಲೆಯ ಫೀಚರ್ ಫೋನ್’ಗಳಲ್ಲೂ ಅಳವಡಿಸಲಾಗಿದೆಯಂತೆ. ಕೆಳ ಮಧ್ಯಮ ವರ್ಗದ ಜನರಿಗೆ ಜಿಯೋವನ್ನು ತಲುಪಿಸುವ ಉದ್ದೇಶದಿಂದ ಜಿಯೋ ಫೀಚರ್ ಫೋನ್’ಗಳನ್ನು ಬಿಡುಗಡೆ ಮಾಡುತ್ತಿದೆ.

Comments are closed.