ಕರ್ನಾಟಕ

ನೋಟು ನಿಷೇಧ: ಜ.22ರಂದು ಬೆಂಗಳೂರಿನಲ್ಲಿ ಮುಖಾಮುಖಿ ಚರ್ಚೆಗೆ ಬಿಜೆಪಿ ನಾಯಕರಿಗೆ ಬಹಿರಂಗ ಆಹ್ವಾನ

Pinterest LinkedIn Tumblr


ಬೆಂಗಳೂರು (ಜ.12): ಪ್ರಧಾನಿ ನರೇಂದ್ರ ಮೋದಿ ಕೈಗೊಂಡಿರುವ ನೋಟು ಅಮಾನ್ಯ ಕ್ರಮದ ಬಗ್ಗೆ ಮುಖಾಮುಖಿಯಾಗಿ ಚರ್ಚಿಸಲು ದಲಿತ ಸಂಘರ್ಷ ಸಮಿತಿ, ಕರ್ನಾಟಕ ಜನಶಕ್ತಿ ಹಾಗೂ ಸ್ವರಾಜ್ ಅಭಿಯಾನ್ ಸಂಘಟನೆಗಳು ಬಿಜೆಪಿ ಸವಾಲೆಸೆದಿವೆ.
ಜ.22ರಂದು ಸೆಂಟ್ರಲ್ ಕಾಲೇಜಿನಲ್ಲಿ ಆಯೋಜಿಸಿರುವ ಈ ಮುಕ್ತ ಚರ್ಚೆಯಲ್ಲಿ ಖ್ಯಾತ ವಕೀಲ ಪ್ರಶಾಂತ್ ಭೂಷಣ್ ಭಾಗವಹಿಸಲಿದ್ದು, ಸಂಘಟಕರು ಬಿಜೆಪಿ ನಾಯಕರು ಹಾಗೂ ನೋಟು ಅಮಾನ್ಯ ಕ್ರಮವನ್ನು ಬೆಂಬಲಿಸುವವರಿಗೆ ಬಹಿರಂಗ ಆಹ್ವಾನವನ್ನು ನೀಡಿದೆ,
ಮುಖಾಮುಖಿ ಚರ್ಚೆಗೆ ಬರುವಂತೆ ಕೋರಿ ಬಿ.ಎಸ್.ಯಡಿಯೂರಪ್ಪ, ಅನಂತ್ ಕುಮಾರ್, ಸಿ.ಟಿ. ರವಿ, ಚಕ್ರವರ್ತಿ ಸೂಲಿಬೆಲೆ ಮುಂತಾದವರಿಗೆ ರಿಜಿಸ್ಟರ್ಡ್ ಅಂಚೆಯ ಮೂಲಕ ಪತ್ರಗಳನ್ನು ಕಳುಹಿಸಲಾಗಿದೆ ಎಂದು ಸಂಘಟಕರು ಹೇಳಿದ್ದಾರೆ. ಜತೆಗೆ ಈ 6 ಪ್ರಶ್ನೆಗಳಿಗೆ ಉತ್ತರಿಸಬೇಕೆಂದು ಕೇಳಿಕೊಂಡಿದ್ದಾರೆ.
• ನೋಟು ರದ್ದತಿಯ ಕ್ರಮದಿಂದ ಕಪ್ಪುಹಣ ಕಡಿಮೆಯಾಗಲು ಸಾಧ್ಯವಿತ್ತೇ? ಕೇಂದ್ರ ಸರ್ಕಾರ ಹೇಳಿದಷ್ಟು ಕಪ್ಪುಹಣ ಪತ್ತೆಯಾಯಿತೇ?
• ಈ ಕ್ರಮದಿಂದ ತಕ್ಷಣದಲ್ಲಿ ನಷ್ಟ ಯಾರಿಗೆ ಆಗಿದೆ? ಎಷ್ಟು ಆಗಿದೆ? ಲಾಭ ಯಾರಿಗೆ ಆಗಿದೆ? ಎಷ್ಟು ಆಗಿದೆ?
• ಕಪ್ಪುಹಣ ಹೊರಗೆ ಬರಲು ನಿಜಕ್ಕೂ ಆಗಬೇಕಾದ ಕ್ರಮಗಳು ಯಾವುವು? ಅದರ ಬಗ್ಗೆ ಮೋದಿ ಸರ್ಕಾರವು ಗಂಭೀರವಾಗಿದೆಯೇ?
• ನಗದುರಹಿತ (ಛಿಚಿshಟess) ಆರ್ಥಿಕತೆಯ ಬಗ್ಗೆ ಇಷ್ಟು ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲಿ ರಾಜಕೀಯ ಪಕ್ಷಗಳ (ಬಿಜೆಪಿ ಮಾತ್ರವಲ್ಲಾ, ಎಲ್ಲಾ ಪಕ್ಷಗಳ) ವಂತಿಗೆಯನ್ನು ನಗದುರಹಿತ ಮತ್ತು ಪಾರದರ್ಶಕ ಮಾಡಲು ಏಕೆ ಕ್ರಮ ಕೈಗೊಳ್ಳುತ್ತಿಲ್ಲ? ಈಗಲಾದರೂ ಆ ನಿಟ್ಟಿನಲ್ಲಿ ಮುಂದಾಗುವರೇ?
• ನಗದುರಹಿತ ಆರ್ಥಿಕತೆ ಯಶಸ್ವಿಯಾಗಿರುವ ದೇಶಗಳು ಯಾವುವು? ಅಲ್ಲಿ ಅಳವಡಿಸಿದ ವಿಧಾನಗಳು ಯಾವುವು? ಎಷ್ಟು ಪ್ರಮಾಣದ ನಗದುರಹಿತ ಆರ್ಥಿಕತೆ ಅಲ್ಲಿ ಸಾಧ್ಯವಾಗಿದೆ? ಭಾರತದಲ್ಲಿ ಎಷ್ಟು ಪ್ರಮಾಣದಲ್ಲಿ ಆಗಬಹುದು? ಭಾರತಕ್ಕೆ ಹೊಂದುವ ವಿಧಾನ ಯಾವುದು?
• ಸದರಿ ಕ್ರಮದಿಂದ ನಷ್ಟಕ್ಕೊಳಗಾದವರಿಗೆ ಪರಿಹಾರ ಕೊಡಬೇಕು. ಲಾಭ ಮಾಡಿಕೊಂಡವರ ಮೇಲೆ ತೆರಿಗೆ ಹಾಕಬೇಕು. ಆ ನಿಟ್ಟಿನಲ್ಲಿ ನಿರ್ದಿಷ್ಟ ಕ್ರಮಗಳ ಆಲೋಚನೆಯೇನಾದರೂ ಸರ್ಕಾರದ ಮುಂದೆ ಇದೆಯೇ?

Comments are closed.