ರಾಷ್ಟ್ರೀಯ

ಬ್ಯಾಂಕಿನ ಹಣವನ್ನೆಲ್ಲ ಕ್ಯಾಶಿನಲ್ಲೇ ತೆಗೆದುಕೊಂಡರೆ ತೊಂದರೆಗೆ ಬೀಳುತ್ತೀರಿ!

Pinterest LinkedIn Tumblr


ನವದೆಹಲಿ(ಜ.13): ಬ್ಯಾಂಕ್​ನಿಂದ ಡ್ರಾ ಮಾಡಿಕೊಳ್ಳುವ ನಗದು ಹಣಕ್ಕೆ ಕ್ಯಾಶ್ ಟ್ಯಾಕ್ಸ್ ಬೀಳುತ್ತಾ..? ಇಂತಹದ್ದೊಂದು ಚಿಂತನೆ ಈಗ ಸರ್ಕಾರದ ಅಂಗಳದಲ್ಲಿ ಸರಿದಾಡ್ತಾ ಇದೆ. ಡಿಜಿಟಲ್ ಪೇಮೆಂಟ್ ಹೆಚ್ಚಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಇಂಥದ್ದೊಂದು ಕ್ರಮ ಜಾರಿಗೊಳಿಸಲು ಚಿಂತನೆ ನಡೆಸಿದೆ. ಬ್ಯಾಂಕ್​​ಗಳಲ್ಲಿ ಹೆಚ್ಚು ಹೆಚ್ಚು ನಗದು ತೆಗೆದುಕೊಳ್ಳುವುದನ್ನು ತಪ್ಪಿಸಿ, ಆನ್​ಲೈನ್ ಪಾವತಿ ಹೆಚ್ಚಿಸಲು ಕೇಂದ್ರ ಈ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಸದ್ಯಕ್ಕೆ ಈ ಚಿಂತನೆ ಇನ್ನೂ ಪ್ರಸ್ತಾವನೆ ಸ್ವರೂಪದಲ್ಲೇ ಇದೆ. ಆದರೆ, ಇದೇನಾದರೂ ಜಾರಿಗೆ ಬಂದರೆ, ಎಟಿಎಂ, ಬ್ಯಾಂಕ್​ನಿಂದ ಪಡೆಯುವ ನಗದು ಹಣಕ್ಕೆ ತೆರಿಗೆ ಪಾವತಿ ಮಾಡಬೇಕಾಗುತ್ತೆ. ಒಂದು ಹಂತದ ಮಿತಿಯನ್ನು ನಿಗದಿ ಮಾಡಿ, ಮೇಲ್ಪಟ್ಟ ನಗದು ಡ್ರಾಗೆ ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ ಎನ್ನಲಾಗಿದೆ.

Comments are closed.