ಕರ್ನಾಟಕ

ಯುವಕನೋರ್ವ ಮದುವೆ ಆಗುದಕ್ಕೆ ಪೀಡಿಸುದ್ದದರಿಂದ ಬೆದರಿದ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

Pinterest LinkedIn Tumblr

ಹಾಸನ: ಪ್ರಿಯಕರ ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯೋರ್ವಳು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನ ಜಿಲ್ಲೆಯ ಆಲೂರು ತಾಲೂಕಿನ ಮಗ್ಗೆಯಲ್ಲಿ ನಡೆದಿದೆ.

ಸುಶ್ಮಿತಾ ಆತ್ಮಹತ್ಯೆಗೆ ಶರಣಾಗಿರುವ ವಿದ್ಯಾರ್ಥಿನಿ. ಸುಶ್ಮಿತಾ ರಾಜಧಾನಿ ಬೆಂಗಳೂರಿನ ಸೆಂಟ್ ಮೇರಿಸ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿಕಾಂ ವ್ಯಾಸಾಂಗ ಮಾಡುತ್ತಿದ್ದಳು.

ಹಾಸನ ಮೂಲದ ವೇಣು ಎಂಬಾತ ಸುಶ್ಮಿತಾಳನ್ನು ಪ್ರೀತಿಸುತ್ತಿದ್ದು, ತನ್ನನ್ನು ಮದುವೆ ಆಗುವಂತೆ ಪೀಡಿಸುತ್ತಿದ್ದ ಎನ್ನಲಾಗಿದೆ.

ವೇಣು ಊರಿಗೆ ಬಂದು ತನ್ನನ್ನು ಮದುವೆಯಾಗದಿದ್ರೆ ಅಪಹರಣ ಮಾಡೋದಾಗಿ ಸುಶ್ಮಿತಾಗೆ ಬೆದರಿಕೆ ಹಾಕಿದ್ದ. ಹೀಗಾಗಿ ಸುಶ್ಮಿತಾ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ.

Comments are closed.