ರಾಷ್ಟ್ರೀಯ

ಲೈಂಗಿಕ ತೃಪ್ತಿ ನೀಡುವಂತೆ 16 ವರ್ಷದ ಪತ್ನಿಗೆ ಲೀಗಲ್ ನೋಟಿಸ್ ಕಳುಹಿಸಿದ ಪತಿಮಹಾಶಯ

Pinterest LinkedIn Tumblr

ಹೈದರಾಬಾದ್: 16 ವರ್ಷದ ವಿದ್ಯಾರ್ಥಿನಿಗೆ ಲೈಂಗಿಕ ಕರ್ತವ್ಯ ನಿರ್ವಹಿಸುವಂತೆ ಆಕೆಯ ದುಪ್ಪಟ್ಟು ವಯಸ್ಸಿನ ಪತಿ ಲೀಗಲ್ ನೋಟಿಸ್ ಕಳುಹಿಸಿದ ಘಟನೆ ಹೈದರಾಬಾದಿನಲ್ಲಿ ನಡೆದಿದೆ.

ತನಗಿಂತ ದುಪ್ಪಟ್ಟು ವಯಸ್ಸಿನ ಪತಿ ದೈಹಿಕ ಮತ್ತು ಮಾನಸಿಕ ಹಿಂಸೆ ನೀಡುತ್ತಿದ್ದಾನೆ ಎಂದು 16 ವರ್ಷದ ಬಾಲಕಿಯೋರ್ವಳು ಪೊಲೀಸ್ ಠಾಣಾ ಮೆಟ್ಟಿಲೇರಿದ್ದಾಳೆ. ಮುತ್ತಿನ ನಗರ ಹೈದರಾಬಾದಿನಲ್ಲಿ ಈ ಹೇಯ ಕೃತ್ಯ ಬೆಳಕಿಗೆ ಬಂದಿದೆ.

10ನೇ ತರಗತಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಬಾಲಕಿಯನ್ನು ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ಆಕೆಗಿಂತ 20 ವರ್ಷ ದೊಡ್ಡವನ ಜತೆ ಮದುವೆ ಮಾಡಿಕೊಳ್ಳಲಾಗಿತ್ತು. ಒತ್ತಡಕ್ಕೆ ಮಣಿದು ಒಪ್ಪಿದ್ದ ಬಾಲಕಿ ಪರೀಕ್ಷೆ ಕೂರಲು ಮತ್ತು ಮುಂದೆ ಓದಲು ಅವಕಾಶ ನೀಡಬೇಕು ಎಂಬ ನಿಬಂಧನೆಯ ಮೇರೆಗೆ ಮದುವೆಯಾಗಿದ್ದಾಳೆ. ಪರೀಕ್ಷೆ ಬಳಿಕ ಗಂಡನ ಮನೆಗೆ ಹೋದ ಆಕೆಯ ಮೇಲೆ ಪ್ರತಿದಿನ ಲೈಂಗಿಕ ಮತ್ತು ಮಾನಸಿಕ ದೌರ್ಜನ್ಯ ನಡೆದಿದೆ. ಆತನ ಲೈಂಗಿಕ ಹಿಂಸೆ ತಾಳಲಾರದೇ ಬಾಲಕಿ ಮನೆಗೆ ಹಿಂತಿರುಗಿದ್ದಳು.

ಮಗಳ ಕಷ್ಟವನ್ನು ಅರ್ಥ ಮಾಡಿಕೊಂಡ ಪೋಷಕರು ಆಕೆಯನ್ನು ತವರಿನಲ್ಲಿಯೇ ಇಟ್ಟುಕೊಂಡಿದ್ದಾಳೆ. ನಿಮಗೆ ನೀಡಲಾದ 1 ಲಕ್ಷ ರೂಪಾಯಿ ವರದಕ್ಷಿಣೆ ಮತ್ತು ಬಂಗಾರವನ್ನು ಹಿಂತಿರುಗಿಸುವಂತೆ ಆಕೆಯ ಪತಿಯ ಮನೆಯವರನ್ನು ಕೇಳಲಾಗಿ ಆಕೆಯ ಪತಿ ಲೈಂಗಿಕ ತೃಪ್ತಿ ನೀಡುವಂತೆ ಲೀಗಲ್ ನೋಟಿಸ್ ಕಳುಹಿಸಿದ್ದಾನೆ.

ಪತಿಯ ಜತೆ ಜೀವನ ನಡೆಸಲು ಒಪ್ಪದ ಬಾಲಕಿ ಮತ್ತೀಗ ಬಾಲಕಿ ಮಕ್ಕಳ ಹಕ್ಕು ಕಾರ್ಯಕರ್ತರ ಬಳಿ ಮೊರೆ ಹೋಗಿದ್ದಾಳೆ. ಈ ಕುರಿತು ಪ್ರತಿಕ್ರಿಯಿಸಿರುವ ಪೊಲೀಸರು ದೂರು ನೀಡುವವರೆಗೆ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ.

Comments are closed.