ಕರ್ನಾಟಕ

ಪೋಷಕರ ಎದುರು ಆತ್ಮಹತ್ಯೆ ಮಾಡಿಕೊಳ್ಳುವಂತೆ ನಟಿಸಿದ ಪಿಯುಸಿ ವಿದ್ಯಾರ್ಥಿನಿಯ ಜೀವ ಹೋಯ್ತು!

Pinterest LinkedIn Tumblr

ಬೆಂಗಳೂರು: ಪೋಷಕರ ಎದುರು ಆತ್ಮಹತ್ಯೆ ಮಾಡಿಕೊಳ್ಳುವಂತೆ ನಟಿಸಿದ ಪಿಯುಸಿ ವಿದ್ಯಾರ್ಥಿನಿ ಮೃತಪಟ್ಟಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇದು ನಿನ್ನೆ ಸಂಜೆ ಬ್ಯಾಟರಾಯನಪುರದಲ್ಲಿ ನಡೆದಿದೆ.

ತರಗತಿ ಮುಗಿಸಿ ತಡವಾಗಿ ಮನೆಗೆ ಬರುವುದಕ್ಕೆ ಪೋಷಕರು ವಿಚಾರಿಸಿದ್ದಕ್ಕೆ ಪಿಯುಸಿ ವಿದ್ಯಾರ್ಥಿನಿ ಕೀರ್ತನಾ ಬಹಳ ನೊಂದಿದ್ದಳು. ನೀವು ಹೀಗೆ ವಿಚಾರಿಸುತ್ತಿದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಕೀರ್ತನಾ ಪೋಷಕರನ್ನು ಬೆದರಿಸಿದ್ದಳು. ಹಾಗೆ ಹೇಳಿ ನೇಣು ಹಾಕಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ನಟನೆ ಮಾಡಿದ್ದಳು. ಆದರೆ ಅದು ನಿಜವಾಯಿತು.

ಉದ್ಯಮಿ ರಮೇಶ್ ಎಂಬುವವರ ಮಗಳು ಕೀರ್ತನಾ ಮೈಸೂರು ರಸ್ತೆಯಲ್ಲಿರುವ ಖಾಸಗಿ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಳು.

ನಿನ್ನೆ ಸಂಜೆ ಕಾಲೇಜಿನಿಂದ ಕೀರ್ತನಾ ಮರಳಿದ ಮೇಲೆ ಈ ಘಟನೆ ನಡೆದಿದೆ. ಸಂಜೆ ತರಗತಿ ಮುಗಿಸಿ ದಿನಾ ಕೀರ್ತನಾ ತಡವಾಗಿ ಮನೆಗೆ ಮರಳುತ್ತಿದ್ದಳು.

ಪೋಷಕರ ಎದುರೇ ನೇಣು ಹಾಕಿಕೊಂಡ ಕೀರ್ತನಾಳನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಬದುಕುಳಿಯಲಿಲ್ಲ. ಬ್ಯಾಟರಾಯನಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Comments are closed.