ಕರ್ನಾಟಕ

ಗಂಡನ ಕಿರುಕುಳ ತಾಳದೆ ಮಗಳೊಂದಿಗೆ ಹೆಂಡತಿ ಆತ್ಮಹತ್ಯೆ

Pinterest LinkedIn Tumblr


ಬೆಂಗಳೂರು,ಜ.೮-ಕೌಟುಂಬಿಕ ಕಲಹದ ಹಿನ್ನಲೆಯಲ್ಲಿ ಮಗಳಿಗೆ ನೇಣು ಬಿಗಿದು ತಾಯಿ ಕೂಡ ನೇಣಿಗೆ ಶರಣಾಗಿರುವ ದುರ್ಘಟನೆ ಗಿರಿನಗರದ ಟಿ ಬ್ಲಾಕ್‌ನಲ್ಲಿ ನಿನ್ನೆ ರಾತ್ರಿ ನಡೆದಿದೆ.
ತಮಿಳುನಾಡು ಮೂಲದ ತನ್ನಮಳೈ(೨೮) ತನ್ನ ೬ ವರ್ಷದ ಮಗಳು ಶ್ರೀದೇವಿಯನ್ನು ಸಂಜೆ ಮನೆಯ ವೆಂಟಿಲೇಟರ್‌ಗೆ ಹಗ್ಗದಿಂದ ನೇಣು ಬಿಗಿದು ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಖಾಸಗಿ ಔಷಧ ಕಂಪನಿಯಲ್ಲಿ ಔಷಧಿ ವಿತರಕರಾಗಿ ಕೆಲಸ ಮಾಡುತ್ತಿದ್ದ ವಿಜಯ್‌ನನ್ನು ತನ್ನಮಳೈ ವಿವಾಹವಾಗಿದ್ದರು ಕಳೆದ ಕೆಲ ವರ್ಷದಿಂದ ಟಿ ಬ್ಲಾಕ್‌ನಲ್ಲಿ ವಾಸಿಸುತ್ತಿದ್ದ ದಂಪತಿ ನಡುವೆ ಇತ್ತೀಚಿಗೆ ಮನಸ್ತಾಪ ಉಂಟಾಗಿತ್ತು.
ವಿಜಯ್ ತಂದೆ ತಾಯಿ ಕೂಡ ಮನೆಗೆ ಬರುತ್ತಿರಲಿಲ್ಲ ಇದರಿಂದ ನೊಂದ ಆಕೆ ಪತಿ ಹಾಗೂ ಮನೆಯವರು ಕಿರುಕುಳ ನೋಡುತ್ತಿದ್ದಾರೆ ಎಂದು ಆತ್ಮಹತ್ಯೆಗೆ ಮುನ್ನ ಡೆತ್ ನೋಟ್ ಬರೆದಿಟ್ಟು ತನ್ನಮಳೈ ಮಗಳಿಗೆ ನೇಣು ಬಿಗಿದು ತಾನೂ ನೇಣಿಗೆ ಶರಣಾಗಿದ್ದಾರೆ.
ನಿನ್ನೆ ಕೆಲಸಕ್ಕೆ ಹೋಗಿದ್ದ ಪತಿ ರಾತ್ರಿ ವಾಪಸಾದ ನಂತರ ಇಬ್ಬರೂ ನೇಣಿಗೆ ಶರಣಾಗಿರುವುದು ಪತ್ತೆಯಾಗಿದೆ ಪ್ರಕರಣ ದಾಖಲಿಸಿರುವ ಗಿರಿನಗರ ಪೊಲೀಸರು ವಿಜಯ್‌ನನ್ನು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ ಎಂದು ಡಿಸಿಪಿ ಡಾ.ಶರಣಪ್ಪ ತಿಳಿಸಿದ್ದಾರೆ.

Comments are closed.