
ನವದೆಹಲಿ(ಜ.08): ನೋಟ್ ಬ್ಯಾನ್ ಆದೇಶ ಜಾರಿಗೊಳಿಸುವುದಕ್ಕೂ ಮೊದಲು ನಿಮ್ಮ ಅಕೌಂಟ್’ಗೆ 2.5 ಲಕ್ಷಕ್ಕೂ ಅಧಿಕ ಮೊತ್ತ ಜಮಾ ಮಾಡಿದ್ದೀರಾ? ಹಾಗಿದ್ದರೆ ನೀವು ಈ ಸ್ಟೋರಿ ಓದಲೇಬೇಕು. ನೀವು ಜಮಾ ಮಾಡಿದ ಹಣ ಅನಧಿಕೃತವಾಗಿದ್ದಾದರೆ ಕಂಟಕ ಎದುರಾಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ವಿತ್ತ ಸಚಿವಾಲಯ ಬ್ಯಾಂಕ್ ಹಾಗೂ ಅಂಚೆ ಕಚೇರಿಯ ಅಧಿಕಾರಿಗಳ ಬಳಿ 2016 ರ ಏಪ್ರಿಲ್ 1 ರಿಂದ 9 ನವೆಂಬರ್ 2016ರವರೆ 2.5 ಲಕ್ಷಕ್ಕೂ ಅಧಿಕ ಮೊತ್ತ ಜಮಾವಣೆ ಮಾಡಿದ ಉಳಿತಾಯ ಖಾತೆಯ ಮಾಹಿತಿ, ಹಾಗೂ 12.5 ಲಕ್ಷಕ್ಕಿಂತ ಅಧಿಕ ಮೊತ್ತ ಜಮೆ ಮಾಡಿದ ಚಾಲ್ತಿ ಖಾತೆಯ ಮಾಹಿತಿಯನ್ನು ನೀಡಲು ಸೂಚಿಸಿದೆ.
ವಿತ್ತ ಸಚಿವಾಲಯ ನೀಡಿದ ಈ ಆದೇಶದ ಬಳಿಕ ಕಾರ್ಯಪ್ರವೃತ್ತವಾದ ಆದಾಯ ತೆರಿಗೆ ವಿಭಾಗ 2.5 ಲಕ್ಷಕ್ಕೂ ಅಧಿಕ ಮೊತ್ತ ಜಮಾವಣೆಗೊಂಡ ಉಳಿತಾಯ ಖಾತೆಗಳ ಮಾಹಿತಿಯನ್ನು ನೀಡುವಂತೆ ಬ್ಯಾಂಕ್ ಹಾಗೂ ಅಂಚೆಕಚೇರಿಗೆ ಸೂಚಿಸಿದೆ.
ಬ್ಯಾಂಕ್ ನೀಡುವ ಡೇಟಾವನ್ನು ಕೇವಲ ತುಲನಾತ್ಮಕ ಅಧ್ಯಯನ ನಡೆಸಲು ಬಳಸಲಾಗುತ್ತದೆ. ಈ ಮೂಲಕ ಇಂತಹ ಖಾತೆಗಳ ಡೆಪಾಸಿಟ್ ಹಿಸ್ಟ್ರಿ ನಮಗೆ ಸಿಗುತ್ತದೆ ಎಂದು ವಿತ್ತ ಸಚಿವಾಲಯ ತಿಳಿಸಿದೆ.
ಇನ್ನು ಬ್ಯಾಂಕ್ ಹಾಗೂ ಅಂಚೆ ಕಚೇರಿಗಳಲ್ಲಿ ಉಳಿತಾಯ ಖಾತೆ ಹೊಂದಿರುವ ಗ್ರಾಹಕರು 2017 ರ ಫೆಬ್ರವರಿ 28ಕ್ಕೂ ಮೊದಲು ತಮ್ಮ ಪಾನ್ ಕಾರ್ಡ್ ನಂಬರ್ ಇಲ್ಲವೇ ಫಾರ್ಮ್ 60ಯನ್ನು ನೀಡುವಂತೆ ವಿತ್ತ ಸಚಿವಾಲಯ ಸೂಚನೆ ಹೊರಡಿಸಿದೆ. ಈ ಮೂಲಕ ಕಪ್ಪು ಹಣವನ್ನು ತಡೆಗಟ್ಟುವುದು ಅವರ ಉದ್ದೇಶವಾಗಿದೆ.
ರಾಷ್ಟ್ರೀಯ
Comments are closed.