ಕರ್ನಾಟಕ

ಮಹಿಳೆಯರ ರಕ್ಷಣೆಯಲ್ಲಿ ಯಾವುದೇ ರಾಜಿ ಇಲ್ಲ: ಪರಮೇಶ್ವರ್

Pinterest LinkedIn Tumblr


ಬೆಂಗಳೂರು (ಜ.05): ಹೊಸ ವರ್ಷದ ರಾತ್ರಿ ನಡೆದ ಘಟನೆಗಳು ದುರದೃಷ್ಟಕರ ಎಂದು ಬಣ್ಣಿಸಿರುವ ಗೃಹಮಂತ್ರಿ ಪರಮೇಶ್ವರ್, ಮಹಿಳೆಯರ ಭದ್ರತೆ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳುವುದಿಲ್ಲ ಎಂದಿದ್ದಾರೆ.
ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಮಾದ್ಯಮದವರೊಂದಿಗೆ ಮಾತನಾಡಿದ ಪರಮೇಶ್ವರ್, ಘಟನೆ ಸಂಬಧಿಸಿ ಈಗಾಗಲೇ ನಾಲ್ವರನ್ನು ಬಂಧಿಸಲಾಗಿದೆ ಎಂದಿದ್ದಾರೆ.
ಬೆಂಗಳೂರಿನ ಬಗ್ಗೆ ಇರುವ ಚಿತ್ರಣವನ್ನು ಬದಲಾಗಲು ಬಿಡುವುದಿಲ್ಲ, ಬೇರೆ ರೀತಿಯಲ್ಲಿ ಬೆಂಗಳೂರನ್ನು ತೋರಿಸುವ ಯತ್ನ ನಡೆಸವುದು ಬೇಡ ಎಂದು ಹೇಳಿದ್ದಾರೆ.
ಘಟನೆ ಬಗ್ಗೆ ರಾಜ್ಯಪಾಲರು ವರದಿಯನ್ನು ಕೇಳಿದ್ದಾರೆ, ಶೀಘ್ರದಲ್ಲೇ ಘಟನೆ ಸಂಬಂಧ ರಾಜ್ಯಪಾಲರಿಗೆ ವರದಿ ಕಳುಹಿಸಲಿದ್ದೇವೆ ಎಂದು ಅವರು ಹೇಳಿದ್ದಾರೆ.
ಬೆಂಗಳೂರಿನಲ್ಲಿ ಭದ್ರತೆಗಾಗಿ ಈಗಾಗಲೇ ಹಲವು ಕ್ರಮ ಕೈಗೊಳ್ಳಲಾಗಿದೆ. ಹೊಸ ವರ್ಷ ಆಚರಣೆಗೆ 1500 ಪೊಲೀಸರನ್ನು ನಿಯೋಜಿಸಿದ್ದೆವು, ಬೆಂಗಳೂರಿನ ಆಯಕಟ್ಟಿನ ಪ್ರದೇಶಗಳಲ್ಲಿ 500 ಸಿಸಿ ಕ್ಯಾಮರಾ ಅಳವಡಿಸುತ್ತೇವೆ ಎಂದು ಹೇಳಿದ್ದಾರೆ.

Comments are closed.