ಕರ್ನಾಟಕ

ಮಂತ್ರಿಮಾಲ್‌ನಲ್ಲಿ ವೇಶ್ಯಾವಾಟಿಕೆ ದಂಧೆ ಮೂವರ ಸೆರೆ

Pinterest LinkedIn Tumblr


ಬೆಂಗಳೂರು,ಜ.೫-ವಿದೇಶಿ ಯುವತಿರನ್ನು ಕರೆ ತಂದು ಮಸಾಜ್ ನೆಪದಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದ ಮಂತ್ರಿಮಾಲ್ ಮೇಲೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಸ್ಪಾ ಪಾರ್ಲರ್ ಮಾಲೀಕ ಸೇರಿ ಮೂವರನ್ನು ಬಂಧಿಸಿ ಮೂವರು ವಿದೇಶಿ ಯುವತಿರನ್ನು ರಕ್ಷಿಸಿದ್ದಾರೆ.
ಮಂತ್ರಿಮಾಲ್‌ನ ಎರಡನೇ ಮಹಡಿಯಲ್ಲಿ ಮಸಾಜ್ ಪಾರ್ಲರ್ ನಡೆಸುತ್ತಿದ್ದ ಮಾಲೀಕ ಸಿನ್ಹಾ ಹಾಗೂ ಬ್ರೋಕರ್ ಹಥೀಮ್, ರಹೀಮ್ ಬಂಧಿತ ಆರೋಪಿಗಳಾಗಿದ್ಧಾರೆ.ಬಂಧಿತರ ವಶದಲ್ಲಿದ್ದ ರಷ್ಯಾದ ಓರ್ವ ಹಾಗೂ ಥೈಲ್ಯಾಂಡಿನ ಇಬ್ಬರು ಯುವತಿರನ್ನು ರಕ್ಷಿಸಲಾಗಿದೆ.ಬಂಧಿತ ಸಿನ್ಹಾ ಗುಜರಾತ್ ಮೂಲದವನೆಂದು ತಿಳಿದು ಬಂದಿದೆ.
ದೇಶಾದ್ಯಂತ ಇರುವ ಸ್ಪಾ ನೇಷನ್ ಪಾರ್ಲರ್‌ಗಳ ಮಾಲೀಕ ಸ್ಯಾಂಡ್ ವಿಚ್ ಎನ್ನುವರು ಬಾಡಿ ಟೂ ಬಾಡಿ ಮಸಾಜ್ ನೆಪದಲ್ಲಿ ದಂಧೆ ನಡೆಸುತ್ತಿದ್ದರು. ೧೦ ರಿಂದ ೨೫ ಸಾವಿರದವರೆಗೂ ಹಣ ಪಡೆಯುತ್ತಿದ್ದ ಪಾರ್ಲರ್ ಮಾಲೀಕರು ವಿದ್ಯಾರ್ಥಿಗಳು, ಟೆಕ್ಕಿಗಳು ಹಾಗೂ ಬ್ಯುಸಿನೆಸ್‌ಮ್ಯಾನ್‌ಗಳೇ ಇವರ ಮುಖ್ಯ ಟಾರ್ಗೆಟ್ ಆಗಿತ್ತು.
ಅಪರಾಧ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಎಸ್. ರವಿ ನೇತೃತ್ವದಲ್ಲಿ ಸಿಸಿಬಿ ಅಧಿಕಾರಿಗಳು ದಾಳಿ ನಡೆಸಿ ಸ್ಪಾದಲ್ಲಿದ್ದವರನ್ನೂ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Comments are closed.