ಕರ್ನಾಟಕ

ಮೈಸೂರು ಆರ್ ಬಿಐ ನೌಕರರು ಹೆಚ್ಚುವರಿ ಕೆಲಸ ಮಾಡಿ 2 ಮಿಲಿಯನ್ ನೋಟು ಮುದ್ರಣ

Pinterest LinkedIn Tumblr

note1
ಮೈಸೂರು: ಮೈಸೂರು ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನೋಟು ಮುದ್ರಣ ಘಟಕ ನೌಕರರ ಸಂಘವು ನವೆಂಬರ್ 8ರ ನಂತರದ ನೋಟು ನಿಷೇಧದ ನಂತರ 2,000 ಮಿಲಿಯನ್ ನೋಟುಗಳನ್ನು ಮುದ್ರಿಸಿದೆ.
ಮೈಸೂರಿನಲ್ಲಿ ಮಾತನಾಡಿದ ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನೋಟು ಮುದ್ರಣ ಘಟಕ ನೌಕರರ ಸಂಘದ ಅಧ್ಯಕ್ಷ ಎಸ್. ಎ ರಾಮದಾಸ್ ಮಾತನಾಡಿ, ಇಲ್ಲಿನ ನೌಕರರು ಹೆಚ್ಚುವರಿ ಸಮಯ ಕೆಲಸ ಮಾಡಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸರಾಸರಿ ನೋಟುಗಳನ್ನು ಮುದ್ರಿಸಿದ್ದಾರೆ ಎಂದು ಹೇಳಿದ್ದಾರೆ.
ತಮ್ಮ ನೌಕರರು ನವೆಂಬರ್ 8 ರ ನಂತರ ಒಂದು ದಿನವೂ ರಜೆಯನ್ನು ಪಡೆಯದೇ, ತಾವೇ ಸ್ವಯಂ ಪ್ರೇರಿತರಾಗಿ 12 ಗಂಟೆಗಳ ಹೆಚ್ಚುವರಿ ಸಮಯ ಕೆಲಸ ಮಾಡುತ್ತಿದ್ದಾರೆ. ವಾರದ 7 ದಿನವೂ ಗರಿಷ್ಠ ಪ್ರಮಾಣದ ನೋಟುಗಳನ್ನು ಮುದ್ರಿಸುತ್ತಿದ್ದಾರೆ.
ಇನ್ನು ಒಂದು ತಿಂಗಳ ಕಾಲ ನೌಕರರು ಹೆಚ್ಚುವರಿ ಸಮಯ ಕೆಲಸ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ. ಆರ್ ಬಿಐ ನೋಟು ಮುದ್ರಣ ಮೈಸೂರು ಘಟಕದಲ್ಲಿ 650 ಮಂದಿ ನೌಕರರು ಮತ್ತು 125 ಅಧಿಕಾರಿಗಳಿದ್ದು, ನವೆಂಬರ್ 8 ರ ನಂತರ ಇಂದಿನವರೆಗೂ ಸುಮಾರಿ 2,000 ಮಿಲಿಯನ್ ನೋಟು ಮುದ್ರಿಸಿದ್ದಾರೆ ಎಂದು ಹೇಳಿದ್ದಾರೆ.
ಡಿಸೆಂಬರ್ ತಿಂಗಳಲ್ಲಿ 1,560 ಮಿಲಿಯನ್ ನೋಟು ಮುದ್ರಿಸಿದ್ದು, ಪ್ರತಿಯೊಬ್ಬ ನೌಕರ 2.4 ಮಿಲಿಯನ್ ನೋಟು ಮುದ್ರಿಸಿದ್ದಾನೆ. ನೋಟು ನಿಷೇಧದ ನಂತರ ನಾವು, ಅಭಿವೃದ್ಧಿ ಹೊಂದಿದ ದೇಶಗಳಾದ ಅಮೆರಿಕಾ ಮತ್ತು ಚೀನಾ ದೇಶಗಳಂತೆ ನಾವು ನೋಟು ಉತ್ಪಾದನೆಯಲ್ಲಿ ಮುಂದೆ ಇದ್ದೇವೆ ಎಂದು ಅವರು ತಿಳಿಸಿದ್ದಾರೆ.

Comments are closed.