ಅಂತರಾಷ್ಟ್ರೀಯ

ಕಾರ್ ಡಿಕ್ಕಿ ಹೊಡೆದು ಗಾಳಿಯಲ್ಲಿ ಎತ್ತರಕ್ಕೆ ಹಾರಿ ಬಿದ್ದರೂ ಕೂಡಲೇ ಎದ್ದ ಸೈಕಲ್ ಸವಾರ!

Pinterest LinkedIn Tumblr

collage-696x647
ಮಾಸ್ಕೋ: ಯೂ ಟರ್ನ್ ಮಾಡುವ ವೇಳೆ ಕಾರ್‍ವೊಂದು ಡಿಕ್ಕಿ ಹೊಡೆದರೂ ಸೈಕಲ್ ಸವಾರ ಬದುಕುಳಿದ ಅಚ್ಚರಿಯ ಘಟನೆ ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ನಡೆದಿದೆ.

ಸೈಕಲ್ ಸವಾರನೊಬ್ಬ ಆಗ ತಾನೇ ಟ್ರಾಫಿಕ್ ಸಿಗ್ನಲ್ ಬಿಟ್ಟು ಕಾರ್‍ಗಳು ಬರುತ್ತಿದ್ದರೂ ಯು ಟರ್ನ್ ತೆಗೆದುಕೊಳ್ಳುತ್ತಿದ್ದ. ಈ ವೇಳೆ ವಿರುದ್ಧ ದಿಕ್ಕಿನಿಂದ ಬಂದ ಕಾರೊಂದು ಸೈಕಲ್‍ಗೆ ಡಿಕ್ಕಿ ಹೊಡೆಯಿತು. ಇದರ ಪರಿಣಾಮ ಸೈಕಲ್ ಸಮೇತ ಆ ಸವಾರ ಗಾಳಿಯಲ್ಲಿ ಹಾರಿ ಮುಂದಕ್ಕೆ ಹೋಗಿ ಕೆಳಗೆ ಬಿದ್ದ. ಇಷ್ಟಾದರೂ ಆತ ಕೂಡಲೇ ಮೇಲೆದ್ದಿದ್ದು ಆತನಿಗೆ ಯಾವುದೇ ಗಾಯಗಳಾಗದಿರುವುದನ್ನು ವಿಡಿಯೋದಲ್ಲಿ ನೋಡಬಹುದು.

ಟ್ರಾಫಿಕ್ ಸಿಗ್ನಲ್‍ನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿರೋ ಈ ಅಪಘಾತದ ವಿಡಿಯೋವನ್ನ ಪೊಲೀಸರು ಬಿಡುಗಡೆ ಮಾಡಿದ್ದು ಜನರಿಗೆ ಜಾಗರೂಕತೆಯಿಂದ ವಾಹನ ಚಾಲನೆ ಮಾಡುವಂತೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ ಈ ಅಪಘಾತಕ್ಕೆ ಸಿಲುಕಿದ ಸೈಕಲ್ ಸವಾರ ಚಿಕಿತ್ಸೆ ನಿರಾಕರಿಸಿ ಮನೆಯತ್ತ ಹೆಜ್ಜೆ ಹಾಕಿದ ಎಂದು ಪೊಲೀಸರು ಹೇಳಿದ್ದಾರೆ.

Comments are closed.