ಕರ್ನಾಟಕ

ಮೈಸೂರು ಉಪವಿಭಾಗಾಧಿಕಾರಿ ಖಾತೆಯಿಂದ 4 ಲಕ್ಷ ಲಪಟಾಯಿಸಿದ ಜವಾನ

Pinterest LinkedIn Tumblr

dud-cheque
ಮೈಸೂರು: ಮೈಸೂರು ಉಪ ವಿಭಾಗಾಧಿಕಾರಿಯ ಸಹಿಯನ್ನು ನಕಲು ಮಾಡಿ, ಅವರ ಬ್ಯಾಂಕ್‌ ಖಾತೆಯಿಂದ 4 ಲಕ್ಷ ರೂ. ಪಡೆದು ದುರುಪಯೋಗಪಡಿಸಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಮೈಸೂರು ವಿವಿ ಎಸ್‌ಬಿಎಂ ಶಾಖೆಯಲ್ಲಿ ಎಸಿ ಆನಂದ್‌ ಅವರು, ಕಚೇರಿಗೆ ಚೆಕ್‌ ಹಾಳೆಗಳ ಸಂಖ್ಯೆ 061276 ರಿಂದ 0613100 ಸಂಖ್ಯೆಯ ಚೆಕ್‌ ಪುಸ್ತಕ ಪಡೆದಿದ್ದರು. ಚೆಕ್‌ ಪುಸ್ತಕದ ಹಾಳೆಗಳನ್ನು ಯಾರಿಗೂ ನೀಡಿರಲಿಲ್ಲ. ಆದರೂ ಚೆಕ್‌ ಹಾಳೆ ನಂಬರ್‌ 061283 ಮೂಲಕ ಜಯಲಕ್ಷ್ಮೀ ಎಂಬುವವರು ತಮ್ಮ ಎಸ್‌ಬಿಐ ಖಾತೆಗೆ ವರ್ಗಾಯಿಸಿಕೊಂಡಿದ್ದಾರೆ ಎಂದು ಎಸಿ ಆನಂದ್‌ ದೂರಿನಲ್ಲಿ ತಿಳಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಸೈಯ್ಯದ್ ಅಯೇಷಾ ಅವರು ಸಹಾಯಕ ಆಯುಕ್ತರಾಗಿದ್ದ ವೇಳೆ ಚೆಕ್ ಬುರ್ ನಾಪತ್ತೆಯಾಗಿತ್ತು, ಆದರೆ ಸಿಬ್ಬಂದಿ ಇದನ್ನು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಕ್ರಮೇಣ ಬ್ಯಾಂಕ್ ಖಾತೆ ಹಣದಲ್ಲಿ ಏರುಪೇರಾದ ಹಿನ್ನೆಲೆಯಲ್ಲಿ ಹೊಸದಾಗಿ ಬಂದಿದ್ದ ಎಸಿ ಆನಂದ್ ಲಕ್ಷ್ಮಿಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ವೆಂಕಟೇಶ ಎಂಬ ಜವಾನ ಚೆಕ್ ಕದ್ದು, ಎಸಿ ಅವರ ಸಹಿಯನ್ನು ನಕಲಿ ಮಾಡಿ ಹಣ ದುರುಪಯೋಗ ಪಡಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿ ವೆಂಕಟೇಶನನ್ನು ಪೊಲೀಸರು ಬಂಧಿಸಿದ್ದಾರೆ.

Comments are closed.