ಕರ್ನಾಟಕ

ಕೆಎಸ್‍ಆರ್‍ಟಿಸಿ ಬಸ್‍ಗೆ ಬೆಂಕಿ; ಸೆಕ್ಯೂರಿಟಿ ಗಾರ್ಡ್ ಸಜೀವ ದಹನ

Pinterest LinkedIn Tumblr

hvr-bus-fire-av-4-final
ಹಾವೇರಿ: ಡಿಪೋದಲ್ಲಿ ನಿಂತಿದ್ದ ಕೆಎಸ್‍ಆರ್‍ಟಿಸಿ ಬಸ್‍ಗೆ ಬೆಂಕಿ ಹೊತ್ತಿಕೊಂಡು ಬಸ್‍ನಲ್ಲಿದ್ದ ಸೆಕ್ಯೂರಿಟಿ ಗಾರ್ಡ್ ಸಜೀವ ದಹನವಾಗಿರುವ ಘಟನೆ ಹಾವೇರಿಯಲ್ಲಿ ನಡೆದಿದೆ.

25 ವರ್ಷದ ನಿಂಗರಾಜ್ ಬೆಳಗುಟ್ಟಿ ಮೃತ ಸೆಕ್ಯೂರಿಟಿ ಗಾರ್ಡ್. ಜಿಲ್ಲೆಯ ರಾಣೇಬೆನ್ನೂರು ಹೊರವಲಯದ ಮಾಗೋಡು ಗ್ರಾಮದ ಹತ್ತಿರವಿರುವ ಬಸ್ ಡಿಪೋದಲ್ಲಿ ಈ ಘಟನೆ ನಡೆದಿದೆ. ಇಂದು ಬೆಳಗಿನ ಜಾವ ಮೂರು ಗಂಟೆಯ ನಂತರ ಬಸ್‍ಗೆ ಬೆಂಕಿ ಹತ್ತಿರಬಹುದು ಎಂದು ಹೇಳಲಾಗುತ್ತಿದೆ. ಬೆಂಕಿ ಹೊತ್ತಿಕೊಂಡ ಪರಿಣಾಮ ಬಸ್‍ನ ಬಹುತೇಕ ಭಾಗ ಸುಟ್ಟು ಕರಕಲಾಗಿದೆ.

ಒಂದು ಬಸ್‍ಗೆ ಬೆಂಕಿ ಹತ್ತಿದ ಪರಿಣಾಮ ಪಕ್ಕದಲ್ಲಿದ್ದ ಇನ್ನೊಂದು ಬಸ್‍ಗೂ ಸಹ ಬೆಂಕಿ ಆವರಿಸಿಕೊಂಡಿದೆ. ಸ್ಥಳಕ್ಕೆ ಹಲಗೇರಿ ಠಾಣೆಯ ಪೊಲೀಸರು ಮತ್ತು ಕೆಎಸ್‍ಆರ್‍ಟಿಸಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಯ ಬಗ್ಗೆ ಹಲಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.