
ನವದೆಹಲಿ: ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಭಾರತದ ಟೆನಿಸ್ ಸ್ಟಾರ್ ಆಟಗಾರ ಸೋಮ್‌ದೇವ್ ದೇವವರ್ಮನ್ ತಮ್ಮ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿದರು.
ಹೊಸ ವರ್ಷದಂದೆ ಟೆನಿಸ್ ವೃತ್ತಿ ಬದುಕಿಗೆ ನಿವೃತ್ತಿ ಘೋಷಿಸಿರುವುದಾಗಿ ಟ್ವೀಟ್ ಮಾಡಿರುವ ಸೋಮ್‌ದೇವ್, ಹೊಸ ಬದುಕಿನ ಭರವಸೆಯೊಂದಿಗೆ ಹೊಸ ವರ್ಷ ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ. ಹಲವು ವರ್ಷಗಳಿಂದ ನನ್ನನ್ನು ಪ್ರೋತ್ಸಾಹಿಸಿ, ಪ್ರೀತಿ ತೋರಿದ ಅಭಿಮಾನಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
31 ವರ್ಷದ ಸೋಮ್‌ದೇವ್ 2008ರಲ್ಲಿ ಟೆನಿಸ್ ವೃತ್ತಿ ಬದುಕಿಗೆ ಪದಾರ್ಪಣೆ ಮಾಡಿದರು. 2012ರಿಂದ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದ ಸೋಮ್‌ದೇವ್, ಇಂದು ತಮ್ಮ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ.
Comments are closed.