ಕರ್ನಾಟಕ

ಚಲನಚಿತ್ರ ಕಲಾನಿರ್ದೇಶಕ ಸುಭಾಷ ಕಡಕೋಳ ನಿಧನ

Pinterest LinkedIn Tumblr

kadalkola

ಧಾರವಾಡ: ಚಲನಚಿತ್ರ ಕಲಾನಿರ್ದೇಶಕ ಸುಭಾಷ ಕಡಕೋಳ (61) ಅನಾರೋಗ್ಯದಿಂದ ಮಂಗಳವಾರ ಇಲ್ಲಿನ ಕಲ್ಯಾಣನಗರದ ತಮ್ಮ ನಿವಾಸದಲ್ಲಿ ನಿಧನರಾದರು.

‘ಪುಟ್ನಂಜ’, ‘ನೀಲಕಂಠ’, ‘ಶುಕ್ಲಾಂಬರದರಂ’, ‘ನನ್ನ ನಿನ್ನ ಪ್ರೇಮ ಕಥೆ’, ‘ಸಂಗ್ಯಾ ಬಾಳ್ಯಾ’ ಸೇರಿದಂತೆ 80ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ಕಲಾ ನಿರ್ದೇಶಕರಾಗಿ ಕೆಲಸ ಮಾಡಿದ್ದ ಅವರು ಬಹುತೇಕ ಚಿತ್ರಗಳಲ್ಲಿ ಸಹನಟರಾಗಿಯೂ ಕಾಣಿಸಿಕೊಂಡಿದ್ದರು. ‘ಮಾರ್ಚ್ 22’ ಇವರ ಕೊನೆ ಚಿತ್ರ. ಸುಭಾಷ ಮೂಲತಃ ಬೈಲಹೊಂಗಲ ತಾಲ್ಲೂಕಿನ ಅಮಟೂರಿನವರು. ಇವರಿಗೆ ಪತ್ನಿ ಹಾಗೂ ಪುತ್ರಿ ಇದ್ದಾರೆ.

ಇಲ್ಲಿನ ಹಾಲಭಾವಿ ಸ್ಕೂಲ್‌ ಆಫ್‌ ಆರ್ಟ್‌ನ ಹಳೆಯ ವಿದ್ಯಾರ್ಥಿಯಾದ ಅವರು ಕಲಾ ಶಾಲೆಯ ಜೊತೆಗೆ ಧಾರವಾಡದೊಂದಿಗೆ ನಂಟು ಬೆಳೆಸಿಕೊಂಡು ಇಲ್ಲಿಯೇ ನೆಲೆಸಿದ್ದರು.
ಹೊಸಯಲ್ಲಾಪುರದ ರುದ್ರಭೂಮಿಯಲ್ಲಿ ಸಂಜೆ ಅಂತ್ಯಕ್ರಿಯೆ ನೆರವೇರಿತು.

Comments are closed.