ಕರ್ನಾಟಕ

ಸಿಎಂ ಸಿದ್ದರಾಮಯ್ಯ ವಿರುದ್ಧ ಶ್ರೀನಿವಾಸ್ ಪ್ರಸಾದ್ ಸಿಡಿಸಿದ ಹೊಸ ಬಾಂಬ್ ಏನು ಗೊತ್ತಾ..?

Pinterest LinkedIn Tumblr

srinivasprasad

ಮೈಸೂರು: ಬಿಜೆಪಿ ಸೇರಲು ಎಲ್ಲಾ ಸಿದ್ಧತೆ ನಡೆಸಿರುವ ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಸಿಎಂ ಸಿದ್ದರಾಮಯ್ಯ ಮತ್ತು ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಅವರ ವಿರುದ್ಧ ವಾಗ್ದಾಳಿ ಮುಂದುವರಿಸಿದ್ದಾರೆ.

ಸಾಮಾಜಿಕ ನ್ಯಾಯದ ಬಗ್ಗೆ ಸಿಎಂ ಹೇಳಿಕೆಗೆ ಪ್ರತಿಕ್ರಿಯೆ ನೀಡಿರುವ ಪ್ರಸಾದ್ ಸಾಮಾಜಿಕ ನ್ಯಾಯಕ್ಕೆ ಯಾರೊಬ್ಬರು ವಾರಸ್ದಾರರಲ್ಲ ಎಂದು ಟಾಂಗ್ ನೀಡಿದ್ದಾರೆ. ಇನ್ನೂ ಸಿದ್ದರಾಮಯ್ಯ ಅವರನ್ನು ಜೆಡಿಎಸ್ ನಿಂದ ಹೊರಹಾಕಿದ್ದಾಗ ಬೇರೆ ಸರ್ಕಾರ ರಚನೆಗೆ ಬೆಂಬಲ ಕೊಡಿ ಅಂತಾ ಎಲ್.ಕೆ. ಅಡ್ವಾಣಿ ಅವರನ್ನು ಭೇಟಿ ಮಾಡಿದ್ದರು ಎಂದು ಶ್ರೀನಿವಾಸ್ ಪ್ರಸಾದ್ ಹೊಸ ಬಾಂಬ್ ಸಿಡಿಸಿದ್ದಾರೆ. ಎಷ್ಟು ಜನ ಜೆಡಿಎಸ್ ನಿಮ್ಮ ಜೊತೆಗಿದ್ದಾರೆ ಎಂಬುದನ್ನು ಸಾಬೀತು ಪಡಿಸಲು ಆಡ್ವಾಣಿ ಸೂಚಿಸಿದ್ದರು ಎಂದು ಪ್ರಸಾದ್ ಆರೋಪಿಸಿದ್ದಾರೆ.

ಬಿಜೆಪಿ ಮತ್ತು ಆರ್ ಎಸ್ ಎಸ್ ಹೊಗಳಿದ ಶ್ರೀನಿವಾಸ್ ಪ್ರಸಾದ್, ಬಿಜೆಪಿ ಅಸ್ಪೃಶ್ಯರ ಪಕ್ಷವಲ್ಲ, ಆರ್ ಎಸ್ ಎಸ್ ಕೂಡ ತನ್ನ ನಿಲವುಗಳಲ್ಲಿ ಕೆಲವು ಬದಲಾವಣೆ ಮಾಡಿಕೊಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಡಾ. ಅಂಬೇಡ್ಕರ್ ಬಗ್ಗೆ ಹೆಚ್ಚಿನ ಗೌರವ ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಪ್ರಧಾನಿಯ ಮನ್ ಕೀ ಬಾತ್ ನನಗೆ ಇಷ್ಟವಾಗಿದೆ. ಅದರಲ್ಲಿ ವಿಶೇಷತೆಯಿದೆ. ಸ್ವಚ್ಛ ಭಾರತ್ ಮೂಲಕ ಹೊಸ ಜಾಗೃತಿ ಶುರುವಾಗಿದ್ದು ಸ್ವಚ್ಛತೆ ಯೆಂದರೆ ಒಂದು ಜಾತಿಗೆ ಸೀಮಿತವಾಗಿತ್ತು. ಸ್ವಲ್ಪವಾದರೂ ಪರಿವರ್ತನೆಯಾಗ್ತಿದೆ. ಈ ವಿಚಾರದಲ್ಲಿ ಪ್ರಧಾನಿ ಮೋದಿ ಅವರ ಕಾರ್ಯ ನನಗೆ ಬಹಳ ಇಷ್ಟವಾಗಿದೆ ಎಂದರು.

ಪರಮೇಶ್ವರ್‌ರನ್ನ ಸೋಲಿಸಿ ಮೂಗ ಮತ್ತು ಕಿವುಡ ಶಾಲೆಗೆ ಮುಖ್ಯೋಪಾಧ್ಯಾಯನನ್ನಾಗಿ ಮಾಡಲಾಗಿದೆ. ನನ್ನನ್ನು ಸಚಿವ ಸಂಪುಟದಿಂದ ತೆಗೆದು ವ್ಯವಸ್ಥಿತವಾಗಿ ಮುಗಿಸಲು ಹೊರಟಿದ್ದಾರೆ ಎಂದು ಸಿದ್ದರಾಮಯ್ಯ ವಿರುದ್ಧ ಶ್ರೀನಿವಾಸ್ ಪ್ರಸಾದ್ ಗಂಭೀರ ಆರೋಪ ಮಾಡಿದರು. ಲೋಕೋಪಯೋಗಿ ಸಚಿವ ಎಚ್.ಸಿ ಮಹಾದೇವಪ್ಪ ಎಂದರೇ ಕಾಂಗ್ರೆಸ್ ಹೈ ಕಮಾಂಡ್ ಗೆ ಸೂಟ್ ಕೇಸ್ ಸಾಗಿಸುವುದು ಎಂದು ಅರ್ಥ ಎಂದು ಲೇವಡಿ ಮಾಡಿದ ಅವರು, ಮುಡಾ ಮಾಜಿ ಅಧ್ಯಕ್ಷ ಸಿ. ಬಸವೇಗೌಡ ಕೂಟ ತಮ್ಮ ಜೊತೆಯಲ್ಲಿ ಬಿಜೆಪಿ ಸೇರುತ್ತಾರೆ ಎಂದು ತಿಳಿಸಿದರು.

Comments are closed.