ಕರಾವಳಿ

ಸರಗಳ್ಳತನ ಪ್ರಕರಣ : ಉಳ್ಳಾಲ ಟೌನ್ ಮುನ್ಸಿಪಲ್ ಕೌನ್ಸಿಲ್‌ನ ಮುಖ್ಯಧಿಕಾರಿ ಮಗನ ಸಹಿತಾ ಇಬ್ಬರ ಬಂಧನ

Pinterest LinkedIn Tumblr

vimarsha_alva_arest

ಮಂಗಳೂರು, ಡಿ. 28: ಸರಗಳ್ಳತನ ಪ್ರಕರಣಕ್ಕೆ ಸಂಬಂಧಿಸಿ ಉಳ್ಳಾಲ ನಗರ ಸಭಾದ ಮುಖ್ಯ ಅಧಿಕಾರಿಯೋರ್ವರ ಮಗನ ಸಹಿತಾ ಇಬ್ಬರನ್ನು ಬಂಧಿಸಿರುವ ಪೊಲೀಸರು ಆರೋಪಿಗಳಿಂದ ಕಳವುಗೈದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಬಂಧಿತ ಆರೋಪಿಗಳನ್ನು ಉಳ್ಳಾಲ ಟೌನ್ ಮುನ್ಸಿಪಲ್ ಕೌನ್ಸಿಲ್‌ನ ಮುಖ್ಯಧಿಕಾರಿ (Ullal TMC chief officer) ವಾಣಿ ಆಳ್ವ ಎಂಬವರ ಪುತ್ರ ಮರೋಳಿಯ ವಿಮರ್ಶ ಆಳ್ವ (21) ಹಾಗೂ ಇನ್ನೋರ್ವ ಆರೋಪಿ ಪಾಂಡೇಶ್ವರ ಶಿವನಗರದ ನಿವಾಸಿ ಸಾಹಿಲ್ ಹುಸೇನ್ (21) ಎಂದು ಹೆಸರಿಸಲಾಗಿದೆ.

ಉಳ್ಳಾಲ ಮತ್ತು ಮೂಡುಬಿದಿರೆ ಪರಿಸರದಲ್ಲಿ ಮಹಿಳೆಯರಿಬ್ಬರ ಸರಗಳ್ಳತನ ನಡೆಸಿದ ಆರೋಪದಲ್ಲಿ ಆರೋಪಿಗಳನ್ನು ಮಂಗಳವಾರ ನಗರದ ಗಣಪತಿ ಹೈಸ್ಕೂಲ್ ರಸ್ತೆಯಲ್ಲಿ ಉತ್ತರ ಠಾಣಾ ಪೊಲೀಸರು ಬಂಧಿಸಿದ್ದಾರೆ.ಆರೋಪಿಗಳಿಂದ ಚಿನ್ನದ ಸರ, ಕೃತ್ಯಕ್ಕೆ ಬಳಸಿದ 2 ಹೋಂಡಾ ಆಯಕ್ವಿವಾ ಸ್ಕೂಟರ್ ಸಹಿತ 2.26 ಲಕ್ಷ ರೂ. ಮೊತ್ತ ವೌಲ್ಯದ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.

ಕಾರ್ಯಾಚರಣೆಯಲ್ಲಿ ಉತ್ತರ ಠಾಣಾ ಇನ್ಸ್ಪೆಕ್ಟರ್ ಶಾಂತರಾಮ್, ಎಸ್‌ಐ ಮದನ್,ಪ್ರೊಬೆಷನರಿ ಎಸ್‌ಐಗಳಾದ ಶೀತಲ್ ಅಲಗೂರ್, ರವಿಪವಾರ್, ಸಿಬ್ಬಂದಿಗಳಾದ ಎಎಸ್‌ಐ ಪದ್ಮನಾಭ, ಹರಿಯಪ್ಪ, ಗೋವರ್ಧನ್, ವಿನಾಯಕ್, ಮಲ್ಲಿಕಾರ್ಜುನ ಭಾಗವಹಿಸಿದ್ದರು.

Comments are closed.